Select Your Language

Notifications

webdunia
webdunia
webdunia
webdunia

ನಮ್ಮ ಪಕ್ಷದ ಏಕೈಕ ಬ್ರಾಹ್ಮನರನ್ನು ಬಿಟ್ಟು ನಾನೇನು ಮಾಡಲಿ: ಎಚ್.ಡಿ.ದೇವೇಗೌಡ

ನಮ್ಮ ಪಕ್ಷದ ಏಕೈಕ ಬ್ರಾಹ್ಮನರನ್ನು ಬಿಟ್ಟು ನಾನೇನು ಮಾಡಲಿ: ಎಚ್.ಡಿ.ದೇವೇಗೌಡ
ಗದಗ , ಶುಕ್ರವಾರ, 20 ಜನವರಿ 2017 (16:11 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ವಿ ದತ್ತಾ ಅವರಿಗೆ ಟಿಕೆಟ್‌ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ನಮ್ಮ ಪಕ್ಷದಲ್ಲಿರುವ ಏಕೈಕ ಬ್ರಾಹ್ಮನರನ್ನು ಬಿಟ್ಟು ನಾನೇನು ಮಾಡಲಿ. ದತ್ತಾ ಅವರ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 
 
ಗದಗ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪ್ಪತಗುಡ್ಡ ವಿಚಾರದಲ್ಲಿ ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರ ತಪ್ಪು ಎಂದು ಅಭಿಪ್ರಾಯಪಟ್ಟರು.
 
ಕಪ್ಪತಗುಡ್ಡ ವಿಚಾರದಲ್ಲಿ ತೋಂಟದಾರ್ಯ ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ಜೆಡಿ‌ಎಸ್ ಪಕ್ಷದ ಬೆಂಬಲ ಇದೆ. ಯಾವುದೇ ಕಾರಣಕ್ಕೂ ಖನಿಜ ಸಂಪನ್ಮೂಲವನ್ನು ಲೂಟಿ ಹೊಡೆಯಲು ಬಿಡಬಾರದು ಎಂದು ಕಿಡಿಕಾರಿದರು.
 
ಅವಶ್ಯಕತೆ ಬಿದ್ದರೆ ಕಪ್ಪತಗುಡ್ಡ ಹೋರಾಟದಲ್ಲಿ ತಾವು ಭಾಗಿಯಾಗುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಖಿಲೇಶ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಶಿವಪಾಲ್ ಹೆಸರು