Select Your Language

Notifications

webdunia
webdunia
webdunia
webdunia

ಜೆಡಿಎಸ್ ಪಕ್ಷಕ್ಕೆ ಮೂರು ಕ್ಷೇತ್ರಗಳಲ್ಲಿ ಮುಖಭಂಗ: ಠೇವಣಿ ಲಾಸ್

ಜೆಡಿಎಸ್ ಪಕ್ಷಕ್ಕೆ ಮೂರು ಕ್ಷೇತ್ರಗಳಲ್ಲಿ ಮುಖಭಂಗ:  ಠೇವಣಿ ಲಾಸ್
ಬೆಂಗಳೂರು: , ಮಂಗಳವಾರ, 16 ಫೆಬ್ರವರಿ 2016 (14:21 IST)
ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಮೂರೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ.  ಹೆಚ್.ಡಿ. ಕುಮಾರಸ್ವಾಮಿ ಭರವಸೆಗೆ ಮತದಾರ ಮಣೆ ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಜೆಡಿಎಸ್ ಈ ಚುನಾವಣೆಯಲ್ಲಿ ಮತವಿಭಜನೆ ಮಾಡಿ ಕಾಂಗ್ರೆಸ್‌ಗೆ ನಷ್ಟ ಉಂಟುಮಾಡುತ್ತದೆಂಬ ಅಭಿಪ್ರಾಯ ಹೊಂದಲಾಗಿತ್ತು.

ಆದರೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಹೀನಾಯ ಪ್ರದರ್ಶನ ನೀಡಿದೆ.  ಜೆಡಿಎಸ್ ನಾಯಕರು ಈ ಚುನಾವಣೆಯನ್ನು ದೊಡ್ಡ ಮಟ್ಟದಲ್ಲಿ ಪರಿಗಣಿಸಿದ್ದರು. ಜೆಡಿಎಸ್ ಮುಖಂಡರು ವಿವಿಧ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಕೈಗೊಂಡಿದ್ದು ನಿಷ್ಫಲವಾಯಿತು.  

ಹೆಬ್ಬಾಳ ವಿಧಾನಸಭೆಯಲ್ಲಿ ಇಸ್ಮಾಯಿಲ್ ಷರೀಫ್ 3666 ಮತಗಳನ್ನು ಇಸ್ಮಾಯಿಲ್ ಷರೀಫ್ ಗಳಿಸಿ ಠೇವಣಿ ಕಳೆದುಕೊಂಡರು. ಬೀದರ್ ವಿಧಾನಸಭೆ ಕ್ಷೇತ್ರದಲ್ಲಿ ಮೊಹಮದ್ ಅಯಾಜ್ 4420 ಮತಗಳನ್ನು ಮಾತ್ರ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.  ದೇವದುರ್ಗದಲ್ಲಿ ಕರಿಯಮ್ಮ 9156 ಮತಗಳನ್ನು ಗಳಿಸಿ ಅವರೂ ಠೇವಣಿ ಕಳೆದುಕೊಂಡಿದ್ದಾರೆ. 

Share this Story:

Follow Webdunia kannada