Select Your Language

Notifications

webdunia
webdunia
webdunia
webdunia

ಜೆಡಿಎಸ್‌ನಲ್ಲಿ ಕೋಲಾಹಲ: ಬಂಡಾಯ ಶಾಸಕರಿಂದ ಪ್ರತ್ಯೇಕ ಆಸನಕ್ಕೆ ಒತ್ತಾಯ

ಜೆಡಿಎಸ್‌ನಲ್ಲಿ ಕೋಲಾಹಲ: ಬಂಡಾಯ ಶಾಸಕರಿಂದ ಪ್ರತ್ಯೇಕ ಆಸನಕ್ಕೆ ಒತ್ತಾಯ
ಬೆಂಗಳೂರು , ಭಾನುವಾರ, 26 ಅಕ್ಟೋಬರ್ 2014 (10:27 IST)
ಶಾಸಕ ಜಮೀರ್ ಅಹಮದ್ ನಾಯಕತ್ವದ ಜೆಡಿಎಸ್ ಶಾಸಕರ  ಗುಂಪು ವಿಧಾನಸಭೆಯಲ್ಲಿ ಪಕ್ಷದ ಸದರಿ ಹಳೆಯ ಸದಸ್ಯರಿಂದ ದೂರದಲ್ಲಿ ಕುಳಿತುಕೊಳ್ಳಲು ಚಿಂತಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ಮುನಿಸಿಕೊಂಡಿರುವ ಜಮೀರ್, ಜೆಡಿಎಸ್ ನ ೪೦ ಶಾಸಕರ ಪೈಕಿ ೨೦ ಶಾಸಕರ ಬೆಂಬಲ ಪಡೆದು ವಿಧಾನಸಭೆಯಲ್ಲಿ ಪ್ರತ್ಯೇಕ ಆಸನಗಳ ಬೇಡಿಕೆಯಿಡಲು ಪ್ರಯತ್ನಿಸುತ್ತಿದ್ದಾರೆ.
 
ಅಹ್ಮದ್ ಅವರಿಗೆ ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ, ವಿಧಾನ ಪರಿಷತ್ತಿನ ಉಪಾಧ್ಯಕ್ಷ ಪುಟ್ಟಣ್ಣ ಮತ್ತು ಶಾಸಕ ಎಚ್ ಸಿ ಬಾಲಕೃಷ್ಣ ಅವರ ಬೆಂಬಲ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ನಾಯಕರು ತಮಗೆ ಪಕ್ಷದ ಮೂಲ ಸಮಿತಿಯಲ್ಲಿ ಯಾವುದೇ ಸ್ಥಾನ ಸಿಕ್ಕದಿರುವುದಕ್ಕೆ ಕುಮಾರಸ್ವಾಮಿಯವರ ಮೇಲೆ ಕೋಪಿಸಿಕೊಂಡಿದ್ದಾರೆ ಎನ್ನಲಾಗಿದೆ.
 
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹತ್ತಿರ ನಿಮ್ಮ ಕೆಲಸ ಮಾಡಿಸಿಕೊಡುತ್ತೇವೆ ಎಂದು ಹೇಳಿ ಈ ನಾಲ್ಕು ಜನ ಶಾಸಕರು ಇನ್ನು ಹೆಚ್ಚಿನ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಮತ್ತು ಕುಟುಂಬದ ವಿರುದ್ಧ ಬಂಡೇಳಲು ಹೆಚ್ಚಿನ ಶಾಸಕರು ಉತ್ಸಾಹ ತೋರುತ್ತಿಲ್ಲ.
 
ಈಗ ಪಕ್ಷದ ಬಂಡಾಯಕಾರರಿಗೆ ಅಗತ್ಯ ಸಂಖ್ಯೆ ಸಿಗದಿದ್ದಲ್ಲಿ, ಪಕ್ಷದಲ್ಲೇ ಇದ್ದುಕ್ಕೊಂಡು ಭಿನ್ನಮತೀಯರಾಗಿ ಗುರುತಿಸಿಕೊಳ್ಳಲು ನಿಶ್ಚಯಿಸಿದ್ದಾರೆ.
 
ಪಕ್ಷದಲ್ಲೇ ಇದ್ದುಕೊಂಡು ಬೇರೆಯಾಗಿ ಗುರುತಿಸಿಕೊಳ್ಳಲು, ಸಿದ್ಧರಾಮಯ್ಯನವರು ಸಲಹೆ ಕೊಟ್ಟಿದ್ದಾರೆಂದು ತಿಳಿದುಬಂದಿದ್ದು " ಚುನಾವಣೆ ಸಮಯದಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಳ್ಳಿ" ಎಂದು ಹೇಳಿದ್ದಾರೆ ಎನ್ನಲಾಗಿದೆ.ನ್ಯಾಷನಲ್ ಟ್ರಾವೆಲ್ಸ್ ನಡೆಸುವ ೩ ಬಾರಿ ಶಾಸಕ ಜಮೀರ್, ಕುಮಾರಸ್ವಾಮಿಯವರ ಆತ್ಮೀಯ ಗೆಳೆಯ ಎಂದು ಬಣ್ಣಿಸಲಾಗುತ್ತಿತ್ತು.
 
ಬೆಂಗಳೂರು ಗ್ರಾಮಾಂತರ ಲೋಕಸಭಾ ಮಧ್ಯಂತರ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಬಿಜೆಪಿ ಯ ಬೆಂಬಲ ಪಡೆಯಲು ನಿರ್ಣಯಿಸಿದಾಗ ಇವರಿಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು.
 
ಶಾಸಕರನ್ನು ಒಟ್ಟುಗೂಡಿಸುವುದಲ್ಲದೆ, ಜಮೀರ್ ವರು ಅಲ್ಪಸಂಖ್ಯಾತ ಸಭೆಗಳಲ್ಲಿ ಭಾಷಣಗಳನ್ನು ಮಾಡಲಿದ್ದಾರೆ. ನವೆಂಬರ್ ೮ ರಂದು ರಾಮನಗರದಿಂದ ಇದು ಪ್ರಾರಂಭವಾಗಲಿದೆ. ಈ ಹಿಂದೆ ಜಮೀರ್ ಅವರ ಲ್ಯಾವೆಲ್ಲೇ ರಸ್ತೆಯ ಮತ್ತು ಸಿ ವಿ ರಾಮನ್ ನಗರದ ಅತಿಥಿಗೃಹಗಳಿಗೆ ಆಗಾಗ ಭೇಟಿ ನೀಡುತ್ತಿದ್ದ ಕುಮಾರಸ್ವಾಮ, ಕಳೆದ ತಿಂಗಳು ಸಿಂಗಪುರ್ ನಿಂದ ಬಂದ ಮೇಲೆ ಆ ಭೇಟಿಗಳನ್ನು ನಿಲ್ಲಿಸಿದ್ದಾರೆ.
 
ಈ ಯಾವುದೇ ಬೆಳವಣಿಗೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿಯವರಿಗೆ ಭಿನ್ನಮತೀಯರನ್ನು ಮತ್ತೆ ಕರೆತರಲು ಯಾವುದೇ ಪ್ರಯತ್ನ ಬೇಡ ಎಂದಿದ್ದಾರೆ.
 

Share this Story:

Follow Webdunia kannada