Select Your Language

Notifications

webdunia
webdunia
webdunia
webdunia

ಜಯಲಲಿತಾ ಸಹೋದರಿ ಶೈಲಜಾ ನಿಧನ

ಜಯಲಲಿತಾ ಸಹೋದರಿ ಶೈಲಜಾ ನಿಧನ
ಬೆಂಗಳೂರು , ಶುಕ್ರವಾರ, 10 ಏಪ್ರಿಲ್ 2015 (13:07 IST)
ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಅವರ  ಸಹೋದರಿ ಶೈಲಜಾ ಗುರುವಾರ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ 58 ವರ್ಷ ವಯಸ್ಸಾಗಿತ್ತು. ಅವರು ಪುತ್ರಿ ಅಮೃತಾ ಅವರನ್ನು ಅಗಲಿದ್ದಾರೆ. 


 
ಕೆಂಗೇರಿ ಬಳಿಯ ರಾಮಸಂದ್ರದಲ್ಲಿ ವಾಸವಾಗಿದ್ದ ಶೈಲಜಾ 25 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವಾರವಷ್ಟೇ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. 
 
ಜಯಲಲಿತಾ ಕಾವೇರಿ ನೀರಿಗಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದರೆ ಶೈಲಜಾ  ಕನ್ನಡಿಗರ ಪರವಾಗಿ ಕಾವೇರಿ ನೀರಿಗಾಗಿ ಹೋರಾಟ ನಡೆಸಿದ್ದರು. ಕೆಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ನಂತರ ಬಿ.ಎಸ್.ಆರ್ ಕಾಂಗ್ರೆಸ್  ಸೇರಿ  ಭಾಷಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ್ದರು.
 
ಅಕ್ಕ- ತಂಗಿಯರ ಸಂಬಂಧದಲ್ಲಿ ಒಡಕಿದ್ದರೂ ಜಯಲಲಿತಾ ಅವರು ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಜೈಲು ಸೇರಿದ್ದಾಗ, ಅಕ್ಕ ಆದಷ್ಟು ಬೇಗ ಬಿಡುಗಡೆಯಾಗಲೆಂದು ಶೈಲಜಾ  ಮೈಸೂರಿನ ಚಾಮುಂಡಿ ದೇವಿಗೆ ಹರಕೆ ಹೊತ್ತಿದ್ದರು. ಜಯಲಲಿತಾ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ 6 ಡಜನ್ ಬಳೆ, ಒಂದು ಸೀರೆಯನ್ನು ಜೇವಿಗೆ ಕಾಣಿಕೆಯಾಗಿ ನೀಡಿ ಹರಕೆ ಪೂರೈಸಿದ್ದರು. 
 
ಕಡುಬಡತನದಲ್ಲಿ ಬದುಕುತ್ತಿದ್ದ ಅವರ ಬಳಿ ಚಿಕಿತ್ಸೆಗೂ ಹಣವಿರಲಿಲ್ಲ ಎಂದು ಹೇಳಲಾಗುತ್ತಿದೆ. ಕೆಂಗೇರಿ ಉಪನಗರದ ಬಿಬಿಎಂಪಿ ವಿದ್ಯುತ್ ಚಿತಾಗಾರದಲ್ಲಿ ಗುರುವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಆದರೆ ಜಯಲಲಿತಾ ಸಹೋದರಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. 

Share this Story:

Follow Webdunia kannada