Webdunia - Bharat's app for daily news and videos

Install App

ತಲೆ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿದೆ ಜವರಾಯ ಪ್ರವೇಶ ದ್ವಾರ..!

Webdunia
ಬುಧವಾರ, 5 ಏಪ್ರಿಲ್ 2023 (19:40 IST)
ಬೆಂಗಳೂರಿನ ಆ ವಾರ್ಡಿಗೆ ಎಂಟ್ರಿ ಕೊಡಬೇಕಾದ್ರೇ ಆ ಆರ್ಚ್ ಕೆಳಗೆ ಹೋಗಬೇಕು. ನಾಲ್ಕೈದು ಪ್ರಮುಖ ರಸ್ತೆಗಳು ಸೇರುವ ಜಂಕ್ಷನ್ ಅದು. ಅದ್ರೇ ಅಲ್ಲಿನ ಪ್ರವೇಶ ದ್ವಾರ ಮಾತ್ರ ಯಾವಾಗ ಬೇಕಾದ್ರು ಬಿದ್ದು ದೊಡ್ಡ ಅನಾಹುತವನ್ನೇ ಸೃಷ್ಟಿಸುವಂತಿದೆ. ಜನ ಅಂತೂ ಆರ್ಚ್ ಸರಿ ಮಾಡಿ ಅಂತವ ಕೇಳಿ ಕೇಳಿ ಜನ ರೋಸಿ ಹೋಗಿದ್ದಾರೆ. ಚುನಾವಣೆಯನ್ನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.ಹೌದು ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸೋಮೇಶ್ವರ ನಗರ ಹೆಬ್ಬಾಗಿಲು ಶಿಥಿಲಾವಸ್ಥೆ ತಲುಪಿದೆ. ಯಾವಾಗ ಬೇಕಾದ್ರೂ ಬೀಳುವ ಹಂತದಲ್ಲಿರುವ ಈ ಆರ್ಚ್ ಕೆಳಗೆ ಸಾವಿರಾರು ವಾಹನ ಸವಾರರು ಭಯದಲ್ಲೇ ಓಡಾಡುತ್ತಿದ್ದಾರೆ

ಕಳೆದ 15 ವರ್ಷಗಳ ಹಿಂದೆ ಬಿಬಿಎಂಪಿ ನಿರ್ಮಿಸಿರುವ ಈ ಆರ್ಚ್ ಅನ್ನ ನಂತರ ಸಂಪೂರ್ಣ ‌ನಿರ್ಲಕ್ಷ್ಯ ಮಾಡಲಾಗಿದೆ.  ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ ವಿಲ್ಸನ್ ಗಾರ್ಡನ್‌ 10th ಕ್ರಾಸ್ ಬಳಿ ಇರುವ ಪ್ರವೇಶ ದ್ವಾರದ ಮೂಲಕವೇ ರಾಜೀವ್ ಗಾಂಧಿ, ಇಂದಿರಾಗಾಂಧಿ, ಸಂಜಯ್ ಗಾಂಧಿ,ನಿಮಾನ್ಸ್ ಆಸ್ಪತ್ರೆಗಳಿಗೆ ಹೋಗಲು ಬಳಸುವ ಪ್ರಮುಖ ರಸ್ತೆ.ಇನ್ನು ಕೋರಮಂಗಲ ವಿಲ್ಸನ್ ಗಾರ್ಡನ್, ಲಾಲ್ ಬಾಗ್, ಜಯನಗರ ನಾಲ್ಕು ದಿಕ್ಕುಗಳಿಂದಲೂ ಬರುವ ವಾಹನಗಳು ಬಂದು ಸೇರುವ ಪ್ರಮುಖ ಜಂಕ್ಷನ್ ಸಹ ಹೌದು. ಆ ಜಂಕ್ಷನ್ ನಲ್ಲೇ ಯಮರಾಯನಂತಾಗಿದೆ ಈ ಸೋಮೇಶ್ವರ ಹೆಬ್ಬಾಗಿಲು.

ಪ್ರತಿ ದಿ‌ನ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು, ಹತ್ತಾರು ಆ್ಯಂಬುಲೆನ್ಸ್ ಇಲ್ಲೇ ಸಂಚರಿಸುತ್ತವೆ. ಯಾವ ಕ್ಷಣದಲ್ಲಿ ಬೇಕಾದರೂ ಕುಸಿದು ಬೀಳುವ ಹಂತದಲ್ಲಿರುವ ಸೋಮೇಶ್ವರ ನಗರ ಹೆಬ್ಬಾಗಿಲು ಸೇರಿದಂತೆ ಮೂಲಭೂತ ಸೌಕರ್ಯ ಕೊರತೆ ಎದುರಿಸುತ್ತಿರುವ ಇಲ್ಲಿನ ನಿವಾಸಿಗಳು ಅಪಾಯಕ್ಕೆ ಆಹ್ವಾನದಂತಿರುವ ಹೆಬ್ಬಾಗಿಲು ದುರಸ್ಥಿ ಮಾಡದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡುತ್ತಿದ್ದಾರೆ.ಅಪಾಯಕ್ಕೆ ಆಹ್ವಾನದಂತಿರುವ ಹೆಬ್ಬಾಗಿಲು ದುರಸ್ಥಿ ಮಾಡಿ ಇಲ್ಲ ನಮಗೆ ಪ್ರತಿಜ್ಞೆ ಮಾಡಿಕೊಡಿ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಬಿಬಿಎಂಪಿಯಾಗಲಿ, ಸ್ಥಳೀಯ ಶಾಸಕರಾಗಲಿ ಯಾವ ರೀತಿ ಸ್ಪಂದಿಸುತ್ತಾರೆ ಎಂಸು ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಂಡಮಾರುತ ಎಫೆಕ್ಟ್‌, ದೇಶದ ಈ ಭಾಗದಲ್ಲಿ ಆ.7ರ ವರೆಗೆ ಭಾರೀ ಮಳೆ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್‌ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಸೇನಾಧಿಕಾರಿ, ಕಾರಣ ಇಲ್ಲಿದೆ

ಭಾರೀ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ ಮೋದಿ

ಉತ್ತರಪ್ರದೇಶ: ಪೃಥ್ವಿನಾಥ ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 11 ಮಂದಿ

ಮೀರತ್‌ ಭಯಾನಕ ಅಪರಾಧ: 7 ತಿಂಗಳ ಗರ್ಭಿಣಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ

ಮುಂದಿನ ಸುದ್ದಿ
Show comments