Select Your Language

Notifications

webdunia
webdunia
webdunia
webdunia

ಸಿಎಂ ಭೇಟಿಗೆ ಜಾರಕಿಹೋಳಿ ನಕಾರ: ಬೆಂಬಲಿಗರ ತಂಡ ಬೆಂಗಳೂರಿಗೆ

ಸಿಎಂ ಭೇಟಿಗೆ ಜಾರಕಿಹೋಳಿ ನಕಾರ: ಬೆಂಬಲಿಗರ ತಂಡ ಬೆಂಗಳೂರಿಗೆ
ಬೆಂಗಳೂರು , ಗುರುವಾರ, 29 ಜನವರಿ 2015 (11:35 IST)
ನಾನಾ ರೀತಿಯ ಕಾರಣಗಳನ್ನು ಹೇಳಿ ರಾಜೀನಾಮೆ ಸಲ್ಲಿಸಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ಸಿಎಂ ಭೇಟಿಗೆ ವೀರಾಕರಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನ ಮುಖಂಡರು ಹಾಗೂ ಅವರ ಬೆಂಬಲಿಗರು ಇಂದು ರಾಜಧಾನಿಗೆ ಆಗಮಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮೂಲಗಳ ಪ್ರಕಾರ, ಸಿಎಂ ಭೇಟಿಗೆ ಸಚಿವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಇಂದು ಬೆಳಗ್ಗೆ ಬೆಳಗಾವಿಯಿಂದ ಹೊರಟಿದ್ದು, ಸಚಿವರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. 
 
ಇನ್ನು ಸಚಿವರ ಪರವಾಗಿ ಮಾತುಕತೆ ನಡೆಸಲು ಆಗಮಿಸುತ್ತಿರುವ ಅವರ ಬೆಂಬಲಿಗರು, ಹಲವು ಷರತ್ತುಗಳೊಂದಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ. ಪ್ರಸ್ತುತ ಇರುವ ಅಬಕಾರಿ ಖಾತೆಯ ಜೊತೆಗೆ ಹೆಚ್ಚುವರಿ ಖಾತೆಯೊಂದನ್ನು ಕೊಡಬೇಕು. ಅದು ಸಂಪುಟ ವಿಸ್ತರಣೆ ವೇಳೆ ನೀಡುತ್ತಾರೋ ಅಥವಾ ಈಗಲೇ ನೀಡುತ್ತಾರೋ ಅದು ಸಿಎಂ ಹಾಗೂ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ ನೀಡುವ ಬಗ್ಗೆ ಸ್ಪಷ್ಟನೆ ಹಾಗೂ ಭರವಸೆ ನೀಡಬೇಕು ಎಂಬುದೂ ಸೇರಿದಂತೆ ಇನ್ನಿತರೆ ಷರತ್ತುಗಳನ್ನು ಸಿಎಂ ಸಿದ್ದರಾಮಯ್ಯನವರ ಮೇಲೆ ಬೆಂಬಲಿಗರ ನಿಯೋಗ ಹೇರಲಿದೆ ಎಂದು ತಿಳಿದು ಬಂದಿದೆ.  

ಬೆಂಬಲಿಗರ ನಿಯೋಗದ ಬಗ್ಗೆ ಪ್ರತಿಕ್ರಿಯಿಸಿರುವ ಜಾರಕಿಹೋಳಿ, ಸಿಎಂ ಸಿದ್ದರಾಮಯ್ಯನವರನ್ನು ನಾನೇ ಖುದ್ದು ಭೇಟಿಯಾಗುವ ಅಗತ್ಯವಿಲ್ಲ. ಆದರೆ ನನ್ನ ಬೆಂಬಲಿಗರು ಸಿಎಂ ಸಿದ್ದರಾಮಯ್ಯನವರ ಜೊತೆಗಿನ ಮಾತುಕತೆಗೆಂದು ರಾಜಧಾನಿಗೆ ತೆರಳುತ್ತಿದ್ದು, ಅಲ್ಲಿ ನಡೆಯುವ ಮಾತುಕತೆಯಲ್ಲಿ ನಮ್ಮ ಷರತ್ತುಗಳಿಗೆ ಭರವಸೆ ಅಥವಾ ಪ್ರತಿಫಲ ಸಿಕ್ಕಿದ್ದೇ ಆದಲ್ಲಿ ಮಾತ್ರ ಮುಂದಿನ ಮುನ್ನಡೆ ಬಗ್ಗೆ ಚಿಂತಿಸಲಿದ್ದೇನೆ ಎಂದಿದ್ದಾರೆ. 

Share this Story:

Follow Webdunia kannada