Select Your Language

Notifications

webdunia
webdunia
webdunia
webdunia

ಕರ್ನಾಟಕ, ತಮಿಳುನಾಡು ಭಾರತ, ಪಾಕಿಸ್ತಾನವೇ?: ಸಚಿವ ಕಾಗೋಡು

ಕರ್ನಾಟಕ, ತಮಿಳುನಾಡು ಭಾರತ, ಪಾಕಿಸ್ತಾನವೇ?: ಸಚಿವ ಕಾಗೋಡು
ಬೆಂಗಳೂರು , ಶನಿವಾರ, 10 ಸೆಪ್ಟಂಬರ್ 2016 (15:43 IST)
ಕರ್ನಾಟಕ ತಮಿಳುನಾಡು ಒಂದೇ ರಾಷ್ಟ್ರದ ಸ್ವರಾಜ್ಯಗಳು. ಕರ್ನಾಟಕ, ತಮಿಳುನಾಡು ರಾಜ್ಯಗಳೇನು ಭಾರತ, ಪಾಕಿಸ್ತಾನವೇ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದಾರೆ.
 
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಪರಸ್ಪರ ಕಷ್ಟ ಸುಖ ಹಂಚಿಕೊಂಡು ಸಾಮರಸ್ಯ, ಸೌಹಾರ್ದತೆಯಿಂದ ಬಾಳಬೇಕಾಗಿದೆ. 
 
ಸುಪ್ರೀಂಕೋರ್ಟ್ ತಜ್ಞರ ತಂಡ ಕಳುಹಿಸಲು ಸೂಚಿಸಿದೆ. ರಾಜ್ಯಕ್ಕೆ ಆಗಮಿಸುವ ತಜ್ಞರ ತಂಡಕ್ಕೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದ್ದಾರೆ.
 
ಈ ಸನ್ನಿವೇಶ ರಾಜಕಾರಣ ಮಾಡಲು ಸಮೃದ್ಧವಾಗಿದೆ.ಹಿಂದೆ ಬೇರೆ ಸರಕಾರವಿದ್ದಾಗಲೂ ಇದೇ ಸಮಸ್ಯೆ ಇತ್ತು. ಇವತ್ತಿಗೂ ಅದೇ ಸಮಸ್ಯೆ ಮುಂದುವರಿದಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೀಗ ಎದುರಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಹಿಂದೆ ಕೂಡಾ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲಾಗಿತ್ತು. ಪ್ರಧಾನಿ ಮೋದಿ ಮಧ್ಯಸ್ಥಿಕೆವಹಿಸಿ ಕಾವೇರಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ನಟರನ್ನು ನಿಂದಿಸಿ ಫೇಸ್‌ಬುಕ್ ಪೋಸ್ಟ್: ಆರೋಪಿ ಸಂತೋಷ್‌ಗೆ ಥಳಿತ