Select Your Language

Notifications

webdunia
webdunia
webdunia
webdunia

ಪೊಲೀಸರು, ಜಿಲ್ಲಾಧಿಕಾರಿಗಳು ದನ ಕಾಯ್ತಿದ್ದಾರಾ: ವಾಟಾಳ್ ಪ್ರಶ್ನೆ

ಪೊಲೀಸರು, ಜಿಲ್ಲಾಧಿಕಾರಿಗಳು ದನ ಕಾಯ್ತಿದ್ದಾರಾ: ವಾಟಾಳ್ ಪ್ರಶ್ನೆ
ಬೆಂಗಳೂರು , ಸೋಮವಾರ, 28 ಜುಲೈ 2014 (14:50 IST)
ಎಂಇಎಸ್ ಕಾರ್ಯಕರ್ತರು ಗಡಿನಾಡ ಗ್ರಾಮಗಳಲ್ಲಿ ಮರಾಠಿ ನಾಮಫಲಕಗಳನ್ನು ನೆಡುತ್ತಿರುವ ಹಿನ್ನೆಲೆಯಲ್ಲಿ ಹಲವು ಕನ್ನಪರ ಸಂಘಟನೆಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದವು. ಸಂಭಾಜಿ ಪಾಟೀಲ್  ಅವರ ಶಾಸಕ ಸ್ಥಾನ ವಜಾ ಮಾಡಲು ಆಗ್ರಹಿಸಿದವು.

ಬೆಂಗಳೂರಿನ ವಿಧಾನಸೌಧದಲ್ಲಿರುವ  ದೇವರಾಜ್ ಅರಸ್ ಪ್ರತಿಮೆ ಎದುರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. 'ಗಂಡುಮೆಟ್ಟಿದ ಕನ್ನಡದ ಗ್ರಾಮಗಳಲ್ಲಿ ಮರಾಠಿ ನಾಮಫಲಕಗಳನ್ನು ಹಾಕಿದ್ದಾರೆ. ಪೊಲೀಸರು, ಜಿಲ್ಲಾಧಿಕಾರಿಗಳು ಏನು ದನ ಕಾಯ್ತಿದ್ದಾರಾ. ನಮ್ಮ ಹಳ್ಳಿಗಳಲ್ಲಿ ಈ ರೀತಿ ನಾಮಫಲಕ ಹಾಕುವುದು ಸರಿಯಲ್ಲ' ಎಂದು ಎಂಇಎಸ್ ಪುಂಡಾಟಿಕೆಗೆ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. 
 
 ಈ ನಡುವೆ ಎಸ್. ಪಿ. ಚಂದ್ರಗುಪ್ತ ಯಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲೆಯ ಗಡಿಭಾಗದಲ್ಲಿ ನಾಕಬಂಧಿ ಹಾಕಿದ್ದೇವೆ. ಇಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದು,ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಚಂದ್ರಗುಪ್ತ ಹೇಳಿದ್ದಾರೆ. 

Share this Story:

Follow Webdunia kannada