Select Your Language

Notifications

webdunia
webdunia
webdunia
webdunia

90 ಬಾರಿ ಅತ್ಯಾಚಾರ ಮಾಡಲು ಸಾಧ್ಯವೇ: ಸ್ವಾಮೀಜಿ ಪರ ವಕೀಲರ ವಾದ

90 ಬಾರಿ ಅತ್ಯಾಚಾರ ಮಾಡಲು ಸಾಧ್ಯವೇ: ಸ್ವಾಮೀಜಿ ಪರ ವಕೀಲರ ವಾದ
ಬೆಂಗಳೂರು , ಗುರುವಾರ, 9 ಅಕ್ಟೋಬರ್ 2014 (17:53 IST)
ರಾಘವೇಶ್ವರ ಭಾರತಿ  ಶ್ರೀಗಳ ವಿರುದ್ಧ  ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸ್ವಾಮೀಜಿಗಳಿಗೆ 30 ದಿನಗಳ ಶರತ್ತುಬದ್ಧ ಮಧ್ಯಂತರ ಜಾಮೀನನ್ನು ಸೆಷನ್ಸ್ ಕೋರ್ಟ್ ಮಂಜೂರು ಮಾಡಿದ್ದು, ಬಂಧನದ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. 2ಲಕ್ಷ ರೂ. ಮೊತ್ತದ ಬಾಂಡ್ ನೀಡುವಂತೆ ಕೋರ್ಟ್ ಸೂಚಿಸಿದೆ ಮತ್ತು ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಹೇಳಿದೆ.  ರಾಘವೇಂದ್ರ ಭಾರತಿ ಸ್ವಾಮೀಜಿ  90 ಬಾರಿ ಅತ್ಯಾಚಾರ ಮಾಡಿದ್ದಾರೆಂದು ರಾಮಕಥಾ ಗಾಯಕಿ ಪ್ರೇಮಲತಾ ಆರೋಪಿಸಿದ್ದಾರೆ. ದೇಶದ ವಿವಿಧೆಡೆ 90 ಬಾರಿ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ.

 90 ಬಾರಿ ಅತ್ಯಾಚಾರ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸ್ವಾಮೀಜಿ ಪರ ವಕೀಲ ಬಿ.ವಿ. ಆಚಾರ್ಯ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು.  ಅತ್ಯಾಚಾರ ಮಾಡಿರುವ ವಿವಿಧ ಸ್ಥಳಗಳನ್ನು ಕೂಡ ಆರೋಪದಲ್ಲಿ ವಿವರಿಸಲಾಗಿದೆ. ಗಾಯಕಿಯ ಪತಿ 3 ಕೋಟಿ ರೂ.ಗಳನ್ನು ಸ್ವಾಮೀಜಿಯ ಬಳಿ ಬೇಡಿಕೆ ಇಟ್ಟಿದ್ದರು.

ಹಣ ನೀಡಲಿಲ್ಲವೆಂದು ಸುಳ್ಳು ದೂರನ್ನು ದಾಖಲಿಸಿದ್ದಾರೆ ಎಂದು ತಮ್ಮ ವಾದದಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ ಅತ್ಯಾಚಾರಕ್ಕೊಳಗಾಗಿದ್ದಾರೆಂದು ಹೇಳಲಾಗಿರುವ ಸಂತ್ರಸ್ತ ಗಾಯಕಿಯ ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ ಗಾಯಕಿಯ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದ್ದು, ಬೆಳಿಗ್ಗೆಯಿಂದಲೇ ರಕ್ಷಣೆ ನೀಡುತ್ತಿದೆ.

Share this Story:

Follow Webdunia kannada