Webdunia - Bharat's app for daily news and videos

Install App

ಕಾಯಕ ಶ್ರೀ ಪ್ರಶಸ್ತಿ ಸ್ವೀಕರಿಸಿದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್

Webdunia
ಸೋಮವಾರ, 16 ಮೇ 2022 (07:35 IST)
ಯಾದಗಿರಿ : ಐಪಿಎಸ್ ಅಧಿಕಾರಿ  ಹಾಗೂ ಸಿಐಡಿ ಅಪರಾಧ ವಿಭಾಗದ ಎಸ್ಪಿ ರವಿ.ಡಿ.ಚೆನ್ನಣ್ಣನವರ್ ಅವರಿಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರದ ಜಡಿಶಾಂತಲಿಂಗೇಶ್ವರ ಹಿರೇಮಠದಲ್ಲಿ ಕಾಯಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
 
 ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜಗದ ಎಲ್ಲಾ ಧಾರ್ಮಿಕ ಕೇಂದ್ರಗಳ ಮೂಲ ಉದ್ದೇಶ ಸರ್ವೇ ಜನ ಸುಖಿಯೋ ಭವ, ಸತ್ಯಂ ಧರ್ಮಂ ಜಯ, ಸತ್ಯಮೇಚ ಜಯತೇ, ಮನುಷ್ಯನಿಗೆ ದೇವರು, ಧರ್ಮ, ಸರಿ-ತಪ್ಪು, ಸಂಸ್ಕಾರವನ್ನು ಹೇಳಿಕೊಡುವ ಮನಸ್ಸಿನ ಶುದ್ಧೀಕರಣ ಕೇಂದ್ರಗಳು ಮಠ, ಮಸೀದಿ, ಚರ್ಚ್, ಜೈನ ಬಸೀದಿಗಳಾಗಿವೆ. ಮನುಷ್ಯನ ಮನಸ್ಸಿನ ಪರಿಶುದ್ದೀಕರಣ ದೇವಸ್ಥಾನಗಳಿಂದ ಸಾಧ್ಯ. ದೇವಸ್ಥಾನಗಳು ಜಾಗೃತಿ  ಮತ್ತು ಶಕ್ತಿಪೀಠಗಳಾಗಿವೆ. ನಮ್ಮನ್ನು ರೀಚಾರ್ಜ್ ಮಾಡಿ ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದರು.
 
 ತಮ್ಮ ವಿದ್ಯಾರ್ಥಿ ಜೀವನವನ್ನು ದೇವಾಪುರ ಮಠದಲ್ಲಿ ಸ್ಮರಿಸಿಕೊಂಡರು. ನಾನು ವಿದ್ಯಾರ್ಥಿಯಾಗಿದ್ದಾಗ ಮಠದಲ್ಲಿ ಪ್ರಸಾಧ ಮತ್ತು ವಿದ್ಯಾಧಾನ ನೀಡಿವೆ, ಹಾಗಾಗಿ ನಾನು ಒಬ್ಬ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಾಯಿತು. ನಾನು ಮಠದಲ್ಲಿಯೇ ಓದಿದ ವಿದ್ಯಾರ್ಥಿ. ಲಿಂ‌.ಪುಟ್ಟರಾಜ ಗವಾಯಿಗಳ ಆಶ್ರಯ ಮತ್ತು ರಾಮಕೃಷ್ಣ ಮಠದ ಶ್ರೀಗಳ ಬೋಧನೆ ನನ್ನ ಜೀವನ ಪರಿವರ್ತನೆಗೆ ಕಾರಣವಾಯಿತು. ಹುಬ್ಬಳ್ಳಿ ಸಿದ್ದರೂಢ ಮಠ, ಮುರುಘಾ ಮಠಗಳನ್ನು ಜೀವನದಲ್ಲಿಯೇ ಮರೆಯಲು ಸಾಧ್ಯವಿಲ್ಲ ಎಂದು ತಮ್ಮ ಮತ್ತು ಮಠಗಳ ನಡುವಿನ ಬಾಂಧವ್ಯವನ್ನು ನೆನಪಿಸಿಕೊಂಡರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಗೊಂದಲಕ್ಕೆ ಇಂದೇ ತೆರೆ: ವಿಜಯೇಂದ್ರ ವಿಶ್ವಾಸ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಹೃದಯಾಘಾತ ತಡೆಯಲು ಮೂರು ಪರೀಕ್ಷೆಗಳು ಕಡ್ಡಾಯ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಧರ್ಮಸ್ಥಳ ಕೇಸ್ ಬಗ್ಗೆ ಇಂದು ಸಚಿವ ಪರಮೇಶ್ವರ್ ಏನು ಹೇಳ್ತಾರೆ ಎಂಬುದೇ ಎಲ್ಲರ ಕುತೂಹಲ

ಮುಂದಿನ ಸುದ್ದಿ
Show comments