ಪಠ್ಯ ಪುಸ್ತಕದ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ. ದಿನದಿಂದ ದಿನಕ್ಕೆ ವ್ಯಾಪಕ ತಿರುವು ಪಡೆಯುತ್ತಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ವಿರುದ್ಧ AIDSO ವಿದ್ಯಾರ್ಥಿ ಸಂಘಟನೆಗಳು ರೊಚ್ಚಿಗೆದ್ದಿದ್ದಾರೆ. ಈಗಾಗಲೇ ಎಡವಟ್ಟಿನ ಮೇಲೆ ಎಡವಟ್ಟು ಮಾಡಿರುವ ರೋಹಿತ್ ಚಕ್ರತೀರ್ಥನನ್ನೇ ದ್ವೀತಿಯ ಪಿಯುಸಿಗೂ ಪಠ್ಯ ಪರಿಷ್ಕರಣೆ ಮಾಡುವ ಕಾರ್ಯವಹಿಸಿದ್ದಾರೆ. ಹೀಗಾಗಿ ರಾಜ್ಯದ್ಯಂತ ಈಗಿರುವ ಪಠ್ಯ ಪರಿಷ್ಕರಣೆಗೆ ಒತ್ತಾಯಿಸಿ ವ್ಯಾಪಾಕ ಅಸಾಮಾಧಾನದ ಕೂಗು ಕೇಳಿಬರ್ತಿದೆ. ಆದರ ಜೊತೆಗೆ ಫ್ರೀಡಂಪಾರ್ಕ್ ನಲ್ಲಿಯೂ AIDSO ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ಹೈಡ್ರಾಮದ ವಿರುದ್ದ ತಿರುಗಿಬಿದ್ದಿದ್ರು. ಹಳೆಯ ಪಠ್ಯಪುಸ್ತಕವನ್ನೇ ವಿದ್ಯಾರ್ಥಿಗಳಿಗೆ ಕೊಡಬೇಕು. ಆದಷ್ಟು ಬೇಗ ಮಕ್ಕಳಿಗೆ ಪುಸ್ತವನ್ನ ಕೊಡಿ ಎಂದು ಆಗ್ರಹಿಸಿದ್ರು. ಅಷ್ಟೇ ಅಲ್ಲದೇ ಈಗ ಹಳೆಯ ಪಠ್ಯವನ್ನ ಪುಸ್ತಕದಲ್ಲಿ ಅಳವಡಿಸಬೇಕು. ಈಗ ತೆಗೆದಿರುವ ಮಹಾನ್ ವ್ಯಕ್ತಿಗಳನ್ನ ಸೇರಿಬೇಕು ಇಲ್ಲವಾದಲಿ ಉಗ್ರ ಹೋರಾಟ ಮಾಡುವುದಾಗಿ ವಿದ್ಯಾರ್ಥಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.