Select Your Language

Notifications

webdunia
webdunia
webdunia
webdunia

ಪತಿಗೆ ಅನ್ಯಾಯ: ಸೀಮೆಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆಗೆ ಯತ್ನ

ಪತಿಗೆ ಅನ್ಯಾಯ: ಸೀಮೆಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆಗೆ ಯತ್ನ
ಮೈಸೂರು , ಗುರುವಾರ, 3 ಸೆಪ್ಟಂಬರ್ 2015 (15:24 IST)
ತನ್ನ ಗಂಡನಿಗೆ ಸೂಕ್ತ ನ್ಯಾಯ ಒದಗಿಸುತ್ತಿಲ್ಲ ಎಂದು ಬೇಸತ್ತ ವಯಸ್ಕ ಮಹಿಳೆಯೋರ್ವರು ನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯದ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. 
 
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಹೆಸರು ಬಂಡಿಯಮ್ಮ(53) ಎಂದು ತಿಳಿದು ಬಂದಿದ್ದು, ಈಕೆಯ ಪತಿ ಚಂದ್ರಪ್ಪ ಅವರು ಇದೇ ವಸತಿ ನಿಲಯದಲ್ಲಿ ಅಡುಗೆ ಭಟ್ಟರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. 
 
ನೊಂದ ಮಹಿಳೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಹಾಸ್ಟೆಲ್‌ ವಾರ್ಡನ್ ಭಾರತಿ ಎಂಬುವವರು ವಿನಾಃ ಕಾರಣ ತಮ್ಮ ಪತಿಗೆ ಕಿರುಕುಳ ನೀಡುತ್ತಿದ್ದು, ಕೆಲಸದಿಂದ ತೆರಳುವಂತೆ, ಕೆಲಸಕ್ಕೆ ಬಾರದಂತೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಅಥವಾ ಸಂಬಂಧಿಸಿದ ಅಧಿಕಾರಿಗಳು ತಮಗೆ ಸೂಕ್ತ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.  
 
ಏನಿದು ಪ್ರಕರಣ?:
ಚಂದ್ರಪ್ಪ ಅವರು ಕಳೆದ ಹಲವು ವರ್ಷಗಳಿಂದ ಅಡುಗೆ ಭಟ್ಟರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ 12 ವರ್ಷಗಳಿಂದ ಸರಿಯಾಗಿ ಸಂಬಳ ನೀಡಿರಲಿಲ್ಲ. ಅಲ್ಲದೆ ಕೆಲಸದಿಂದಲೂ ತೆಗೆದು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಚಂದ್ರ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಅವರಿಗೆ ಸೇರಬೇಕಿರುವ ಸಂಬಳ ನೀಡಿ. ಇಲ್ಲವಾದಲ್ಲಿ ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಂಡು ಅವರಿಗೆ ಬರಬೇಕಿರುವ ಹಣವನ್ನು ಪಾವತಿಸಲಾಗುವುದು ಎಂಬ ಎಚ್ಚರಿಕೆ ನೀಡಿತ್ತು. ಅಲ್ಲದೆ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದೂ ಆದೇಶಿಸಿತ್ತು. ಆದರೆ ಕೋರ್ಟ್ ಆದೇಶಕ್ಕೂ ಕೂಡ ತಲೆ ಬಾಗದೆ ವಾರ್ಡನ್ ಭಾರತಿ ಅವರು ದುರ್ವತನೆ ತೋರುತ್ತಿದ್ದಾರೆ. ಅಲ್ಲದೆ ನಿವೃತ್ತಿಯಾಗಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ನಿವೃತ್ತಿ ಪತ್ರವನ್ನೂ ಕೂಡ ರವಾನಿಸುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. 
 
ಈ ನಡುವೆಯೂ ಕೂಡ ಚಂದ್ರಪ್ಪ ಕೆಲಸಕ್ಕೆ ಹಾಜರಾಗುತ್ತಿದ್ದರು ಎನ್ನಲಾಗಿದ್ದು, ಕಳೆದ ಸೋಮವಾರ ಅವರನ್ನು ಮತ್ತೆ ಕೆಲಸಕ್ಕೆ ಬಾರದಂತೆ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ನ್ಯಾಯ ಸಿಗದಿದ್ದಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸಂಗತಿಯನ್ನು ಪೊಲೀಸರು ಕಂಡು ಆಕೆಯನ್ನು ಆತ್ಮಹತ್ಯೆ ಯತ್ನದಿಂದ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. 
 
ಈ ಸಂಬಂಧ ವಾರ್ಡನ್ ಭಾರತಿ ಪ್ರತಿಕ್ರಿಯಿಸಿದ್ದು, ನಾನು ಅಂತಹ ಕಿರುಕುಳವನ್ನೇನೂ ನೀಡಿಲ್ಲ. ಆದರೆ ಅವರಿಗೆ ವಯಸ್ಸಾಗಿರುವ ಕಾರಣ ದೊಡ್ಡ ದೊಡ್ಡ ಪಾತ್ರೆಗಳನ್ನು ಎತ್ತಿಟ್ಟು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಿವೃತ್ತಿ ಪಡೆಯಿರಿ ಎಂದು ತಿಳಿಸಿದ್ದೆನಷ್ಟೇ ಎಂದಿದ್ದಾರೆ. 

Share this Story:

Follow Webdunia kannada