Select Your Language

Notifications

webdunia
webdunia
webdunia
webdunia

ಇಂಜೆಕ್ಸನ್ ನೀಡಿದ್ದ ಬಾಲಕಿ ಮಾನಸಿಕ ಅಸ್ವಸ್ಥಳಲ್ಲ

ಇಂಜೆಕ್ಸನ್ ನೀಡಿದ್ದ ಬಾಲಕಿ ಮಾನಸಿಕ ಅಸ್ವಸ್ಥಳಲ್ಲ
ಕೋಲಾರ , ಶುಕ್ರವಾರ, 26 ಫೆಬ್ರವರಿ 2016 (09:09 IST)
ಕೋಲಾರ ಜಿಲ್ಲೆಯ ನಕ್ಕಲಗೂಡು ಗ್ರಾಮದಲ್ಲಿ 12 ಮಕ್ಕಳಿಗೆ ಪಶುಗಳಿಗೆ ನೀಡುವ ಇಂಜೆಕ್ಷನ್ ನೀಡಿ ಬಂಧನಕ್ಕೊಳಗಾಗಿದ್ದ ಬಾಲಕಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾಳೆ. ಕೆಜಿಎಫ್  ನ್ಯಾಯಾಲಯ ಆಕೆಗೆ ಜಾಮೀನು ನೀಡಿದೆ. 
 
ಮನೆಮನೆಗೆ ತೆರಳಿ ತಾನು ನರ್ಸ್ ಎಂದು ಹೇಳಿಕೊಂಡ 13 ವರ್ಷದ ಶೈಲಜಾ  ಪಶುಗಳಿಗೆ ನೀಡುವ ಇಂಜೆಕ್ಷನ್ ನೀಡಿ 14 ಮಕ್ಕಳು ಅಸ್ವಸ್ಥರಾಗಲು ಕಾರಣಳಾಗಿದ್ದಳು. ಆಕೆಯನ್ನು ಬಂಧಿಸಿದ್ದ ಪೊಲೀಸರು ಕೆಜಿಎಫ್‌ನ ಬಾಲ ಮಂದಿರಕ್ಕೆ ಸೇರಿಸಿದ್ದರು.
 
ಈ ಮೊದಲು ಬಾಲಕಿ ಮಾನಸಿಕ ಅಸ್ವಸ್ಥಳು ಎಂದು ಹೇಳಲಾಗುತ್ತಿತ್ತು ಆದರೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಆರೋಗ್ಯವಾಗಿರುವುದು ತಿಳಿದು ಬಂತು. 
 
ಹುಡುಗಾಟದಲ್ಲಿ ಬಾಲಕಿ ಈ ಕೃತ್ಯ ಎಸಗಿದ್ದಾಳೆ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. 

Share this Story:

Follow Webdunia kannada