ಇಂದಿರಾ ಕ್ಯಾಂಟೀನ್ ಗೆ ಹೊಸ ಟೆಂಡರ್ ಅನುಮತಿ ಸಿಕ್ಕಿದ್ದು,ಎರಡು ಮೂರು ದಿವಸಗಳಲ್ಲಿ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ.ಆಗಸ್ಟ್ 1 ರಂದು ಹೊಸ ಮೆನ್ ತಯಾರಿಗೆ ಫ್ಲಾನ್ ನಡೆಸಲಾಗಿದ್ದು,ಕಂಪ್ಲೀಟ್ ಆಹಾರ ಮೆನ್ ಚೇಂಜ್ ಮಾಡಲು ನಿರ್ಧಾರ ಮಾಡಲಾಗಿದೆ.ಉತ್ತಮ ಗುಣಮಟ್ಟ ಯೋಜನೆ ತರಲು ನಿರ್ಧಾರ ಮಾಡಿದ್ದು,ಪ್ರತಿ ಬಿಬಿಎಂಪಿ ವಲಯಕ್ಕೆ ಒಂದರಂತೆ ಎಂಟು ಪ್ಯಾಕೇಜ್ ಮುಂಜಾನೆ ತಿಂಡಿ ಮಧ್ಯಾಹ್ನ ಊಟ ಕೊಡಲು ವ್ಯವಸ್ಥೆ ಮಾಡಲಾಗಿದೆ.200ಕ್ಯಾಂಟಿನ್ ನಟೆಸಲು ದಿನಕ್ಕೆ 31 ಲಕ್ಷ ಖರ್ಚಾಗುತ್ತೆ.ಪ್ರತಿ ವಾರ್ಡ್ ಒಂದರಂತೆ ಇಂದಿರಾ ಕ್ಯಾಂಟೀನ್ ಇರಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.