ಕರ್ನಾಟಕ ಮೂಲದ 19 ವರ್ಷ ವಯಸ್ಸಿನ ಮಹಿಳೆಯೊಬ್ಬಳು ವಿಶ್ವದಲ್ಲಿಯೇ ಅತಿ ಭಾರವಾದ 6.8 ಕೆಜಿ ತೂಕದ ಮಗುವನ್ನು ಹೆತ್ತು ಗಿನ್ನಿಸ್ ದಾಖಲೆ ಬರೆದಿದ್ದಾಳೆ.
ಹಾಸನ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ನಂದಿನಿ ಎನ್ನುವ ಮಹಿಳೆ ತನ್ನ 6.8.ಕೆಜಿ ಭಾರದ ಮೊದಲ ಮಗುವನ್ನು ಹೆತ್ತಿದ್ದಾಳೆ.
ನಂದಿನ ಐದು ಅಡಿ ಒಂಬತ್ತು ಇಂಚ್ ಎತ್ತರವಿದ್ದು 94 ಕೆಜಿ ಭಾರವಿದ್ದು ಸಕ್ಕರೆ ರೋಗದಿಂದ ಬಳಲುತ್ತಿದ್ದಾಳೆ. ಮಗು ಕೂಡಾ ಸಕ್ಕರೆ ರೋಗದಿಂದ ಬಳಲುತ್ತಿರಬಹುದೇ ಎನ್ನುವ ಆತಂಕ ವೈದ್ಯರನ್ನು ಕಾಡುತ್ತಿದೆ.
ಆದರೆ, ನಂದಿನಿ ಆರೋಗ್ಯವಂತ ಹೆಣ್ಣು ಮಗುವನ್ನು ಹೆತ್ತಿದ್ದಾಳೆ. ಸರಾಸರಿ ಮಗುವಿನ ಭಾರ 3.4 ಕೆಜಿಯಾಗಿರುತ್ತದೆ. ಈಕೆ ಹೆತ್ತ ಮಗುವಿನ ಭಾರ ದುಪ್ಪಟ್ಟಾಗಿದೆ.
ಕೆಲವು ದಿನಗಳ ಹಿಂದೆ 6.7 ಕೆಜಿ ಭಾರವಿರುವ ಗಂಡು ಮಗುವಿನ ಜನನವಾಗಿತ್ತು. ನಂದಿನಿಯ ಪುತ್ರಿ ಇದೀಗ ಎಲ್ಲಾ ದಾಖಲೆಗಳನ್ನು ನುಚ್ಚು ನೂರು ಮಾಡಿದ್ದಾಳೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.