Select Your Language

Notifications

webdunia
webdunia
webdunia
webdunia

ಉಬರ್ ಚಾಲಕನಿಂದ ಮಹಿಳೆಯ ಎದುರು ಹಸ್ತ ಮೈಥುನ

ಉಬರ್ ಚಾಲಕನಿಂದ ಮಹಿಳೆಯ ಎದುರು ಹಸ್ತ ಮೈಥುನ
ಬೆಂಗಳೂರು , ಗುರುವಾರ, 24 ಮಾರ್ಚ್ 2016 (08:39 IST)
ಬೆಂಗಳೂರಿನಲ್ಲಿ ಉಬರ್ ಕಾರ್  ಚಾಲಕ ಅಸಭ್ಯ ವರ್ತನೆ ತೋರಿದ ಘಟನೆ ವರದಿಯಾಗಿದೆ.
 
ಮಾರ್ಚ್ 22 ಮಂಗಳವಾರ ಸಾಯಂಕಾಲ ಈ ಘಟನೆ ನಡೆದಿದ್ದು ತನ್ನ ಎದುರೇ ಚಾಲಕ ಹಸ್ತಮೈಥುನ ನಡೆಸಿದ್ದಾಗಿ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ದೂರನ್ನು ದಾಖಲಿಸಿದ್ದಾಳೆ.
 
ಕಾರ್ ಸಿಗ್ನಲ್ ಬಳಿ ನಿಂತಿದ್ದಾಗ ಪದೇ ಪದೇ ಚಾಲಕ ಹಸ್ತಮೈಥುನ ಮೈಥುನ ಮಾಡಿಕೊಂಡಿದ್ದಾನೆ. ಒಟ್ಟು 3 ಬಾರಿ ಈ ರೀತಿಯಲ್ಲಿ ದುರ್ವರ್ತನೆ ತೋರಿದ್ದಾನೆ. ತನ್ನ ಜತೆ ಸಹ ಅಸಭ್ಯವಾಗಿ ವರ್ತಿಸಿದ್ದಾನೆ. ಘಟನೆಯಿಂದ ನನಗೆ ಮುಜುಗರ ಉಂಟಾಯಿತು ಎಂದು ಮಹಿಳೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾಳೆ. 
 
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಉಬರ್ ಕಾರ್ ಬಾಡಿಗೆ ಪಡೆದು  ಬಿಟಿಎಂ ಲೇಔಟ್‌ಗೆ ಹೊರಟಿದ್ದಳು. ಆದರೆ ಕಾರ್ ಸಿಗ್ನಲ್‌ನಲ್ಲಿ ನಿಂತಾಗಲೆಲ್ಲ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಆತ ದುರ್ವರ್ತನೆ ತೋರುತ್ತಿದ್ದರೂ ಮತ್ತೆನಾದರೂ ಅಪಾಯ ಉಂಟುಮಾಡಬಹುದೆಂಬ ಭೀತಿಯಲ್ಲಿ ಮಹಿಳೆಯ ಏನೂ ಮಾತನಾಡದೆ ಕುಳಿತಿದ್ದಾಳೆ. ತಾನು ಇಳಿಯಬೇಕಾದ ಸ್ಥಳ ಬಂದ ಮೇಲೆ ಕೆಳಗಿಳಿದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಮೊದಲು ತಾನೇನು ತಪ್ಪು ಮಾಡಿಲ್ಲವೆಂದು ವಾದಿಸಿದ ಚಾಲಕ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡು ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾನೆ.
 
ಬಳಿಕ ಉಬರ್ ಕಂಪನಿಗೆ ಈ ಕುರಿತು ಮಹಿಳೆ ದೂರು ನೀಡಿದ್ದಾಳೆ. ಆದರೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಚಾಲಕನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಬಳಿಕ ಮಹಿಳೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 
 
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ವಿಭಾಗ 509 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 
 

Share this Story:

Follow Webdunia kannada