ಗ್ಲಾಕೋಮ ರೋಗ ಗಂಭೀರ ಹಂತಕ್ಕೆ ಹೋಗುವವರೆಗೂ ದೃಷ್ಟಿಯಲ್ಲಿ ಬದಲಾವಣೆ ಕಾಣುವುದಿಲ್ಲ.ಮಧುಮೇಹ ,ಅಧಿಕ ರಕ್ತದೊತ್ತಡ, ಅಧಿಕ ಪ್ಲಸ್, ಮೈನಸ್ ಗ್ಲಾಸ್ ಪವರ್ ಹೊಂದಿದ್ದರೆ,ಸ್ಟಿರಾಯಿಡ್ ಗಳೊಂದಿಗೆ ಚಿಕಿತ್ಸೆ ಪಡೆದಿದ್ದರೆ ಕುಟುಂಬದಲ್ಲಿ ಯಾರಿಗಾದ್ರು ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ. ಮನೆಯಲ್ಲಿಯೇ ಆನ್ ಲೈನ್ ಮೂಲಕ ಶಾಲೆ, ಕಚೇರಿ ಕೆಲಸದಿಂದಾಗಿ ಸುದೀರ್ಘವಾಗಿ ಲ್ಯಾಪ್‌ಟಾಪ್ ಬಳಸುವುದರಿಂದ ಈ ಸಮಸ್ಯೆ ಉಲ್ಬಣಿಸುತ್ತೆ.ನಗರದಲ್ಲಿ ಡ್ರೈ ಐ ಕಣ್ಣಿನ ಸಮಸ್ಯೆ ಕೂಡ ಶೇ 30 % ಜನರಲ್ಲಿ ಉಲ್ಬಣಿಸಿದೆ. ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದಲ್ಲಿ ಈಗ ರೋಗಿಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ. ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.
ಕಣ್ಣಿನ ಆರೋಗ್ಯವಾಗಿ ಕಾಪಾಡಲು ವೈದ್ಯರ ಸಲಹೆ
- 20 ನಿಮಿಷಗಳಿಗೊಮ್ಮೆ ದೂರದ ವಸ್ತುಗಳನ್ನ ವೀಕ್ಷಣೆ ಮಾಡಬೇಕು
- ಆಗಾಗ್ಗೆ ಕಣ್ಣನ ಮಿಟುಕಿಸುತ್ತಿರಬೇಕು
- ಉತ್ತಮವಾದ ಗಾಳಿ ಬೆಳಕು ಇರುವ ಸ್ಥಳದಲ್ಲಿ ಕೆಲಸ ಮಾಡಬೇಕು
- ನಿಯಮಿತವಾಗಿ ಕಣ್ಣಿನ ಆರೋಗ್ಯ ತಪಾಸಣೆ ಮಾಡಿಸಬೇಕು
- ನಿರಂತರವಾಗಿ ಕಂಪೂಟ್ಯರ್ ಮುಂದೆ ಕೆಲಸ ಮಾಡುವುದು ಕಡಿಮೆ ಮಾಡಬೇಕು