ರಾಜ್ಯದ ಸಾಲದ ಹೊರೆ ಹೆಚ್ಚಳ: ಎನ್ ಎಂ ನವೀನ್ ಕುಮಾರ್ ಕಿಡಿ

Webdunia
ಗುರುವಾರ, 3 ಫೆಬ್ರವರಿ 2022 (21:44 IST)
ಕಷ್ಟದ ಸಮಯದಲ್ಲಿ ಜನರಿಗೆ ತೆರಿಗೆ ವಿನಾಯಿತಿ ನೀಡಿಲ್ಲ. ಕರ್ನಾಟಕಕ್ಕೆ ಸಾಲದ ಹೊರೆ ಹೆಚ್ಚು ಮಾಡಲಾಗಿದೆ. ಇದರ ಪರಿಣಾಮ ರಾಜ್ಯದ ಜನರೇ ಮತ್ತಷ್ಟು ತೆರಿಗೆ ಕಟ್ಟಬೇಕಾಗಬಹುದು’ ಎಂದು ಕಾಂಗ್ರೆಸ್ ಯುವ ಮುಖಂಡ   ಎನ್ ಎಂ ನವೀನ್ ಕುಮಾರ್ ಕಳವಳ ವ್ಯಕ್ತಪಡಿಸಿದರ’ ದೇಶದ ಸಾಲ ಹೆಚ್ಚುತ್ತಲೇ ಇದೆ. ₹ 93 ಲಕ್ಷ ಕೋಟಿ ಇದ್ದ ಸಾಲ ಒಂದೇ ವರ್ಷದಲ್ಲಿ ₹ 135 ಲಕ್ಷ ಕೋಟಿ ದಾಟಿದೆ. ರಾಜ್ಯದ ಪಾಲಿನ ಜಿಎಸ್‌ಟಿ ಇನ್ನೂ ಕೊಟ್ಟಿಲ್ಲ. ₹ 30 ಸಾವಿರ ಕೋಟಿ ಸಾಲ ಕೊಡುತ್ತಾರೆ. ಇದು ಯಾವ ನ್ಯಾಯ? ಹಣದುಬ್ಬರ ಕಡಿಮೆ ಮಾಡಲು ಕ್ರಮ ತೆಗೆದುಕೊಂಡಿಲ್ಲ. ಪೆಟ್ರೋಲ್ ಉತ್ಪನ್ನದ ಮೇಲೆ ಶೇ 2ರಷ್ಟು ತೆರಿಗೆ ಹಾಕಲಾಗಿದೆ. ನದಿ ಜೋಡಣೆ ಪ್ರಸ್ತಾಪ ಮಾಡಿದ್ದರೂ ರಾಜ್ಯವನ್ನು ಕಡೆಗಣಿಸಲಾಗಿದೆ’ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
‘ಬಡವರಿಗೆ ಮಧ್ಯಮ ವರ್ಗ, ಕೂಲಿ ಕಾರ್ಮಿಕ ವರ್ಗ ಇವರನ್ನೆಲ್ಲಾ ಸಂಪೂರ್ಣವಾಗಿ ಮರೆತಿದೆ. ಈ ಬಾರಿಯ ಕೇಂದ್ರ ಬಜೆಟ್ ಸುಳ್ಳು ಘೋಷಣೆಗಳ ನಿರಾಶಾದಾಯಕ. ಅತ್ಯಂತ ದುರ್ಬಲವಾಗಿದೆ. ರೈತರು, ಮಹಿಳೆಯರು, ಕಾರ್ಮಿಕರು, ಶ್ರಮಿಕರ ವಿರೋಧಿ ಬಜೆಟ್. ಆಶಾ ಕಾರ್ಯ ಕರ್ತೆಯರು, ದುಡಿಯುವ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಸಾಮಾನ್ಯ ಮಹಿಳೆಯರು ಸೇರಿ ಶ್ರಮಿಕರಿಗೆ ಯಾವ ಕೊಡುಗೆಯೂ ಇಲ್ಲ’ ಎಂದರು.
‘ಎರಡು ವರ್ಷಗಳಿಂದ ಕರ್ನಾಟಕದ ಜನರು ಕೋವಿಡ್, ಅತಿವೃಷ್ಟಿ, ಅನಾವೃಷ್ಟಿಯಿಂದ ಬದುಕನ್ನೇ ಕಳೆದುಕೊಂಡಿದ್ದಾರೆ. ಇವರ ಆರ್ಥಿಕ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಬಡ ವರ್ಗದ ಜನರನ್ನು ಮರೆತು ಶ್ರೀಮಂತರ ಪರವಾಗಿ ಯೋಜನೆಗಳನ್ನು ಪ್ರಕಟಿಸಲಾಗಿದೆ’ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ: ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments