ಪ್ರತಿವರ್ಷವೂ ಕೂಡ ಹೊಸವರ್ಷ ಆಚರಣೆಯ ದಿನ ಒಂದಿಲ್ಲೊಂದು ಪ್ರಕರಣಗಳು ಕಬ್ಬನ್ ಪಾರ್ಕ್, ಅಶೋಕ್ ನಗರ ಠಾಣೆಯಲ್ಲಿ ದಾಖಲಾಗ್ತಾನೇ ಇರೋದು ಮಾಮೂಲಾಗಿಬಿಟ್ಟಿದೆ. ಬೆಂಗಳೂರಿನ ಶೇಕಡಾ 60 ರಷ್ಟು ಜನರು ಹೊಸವರ್ಷ ಆಚರಣೆಗಾಗಿ ಎಂಜಿ ರಸ್ತೆ-ಬ್ರಿಗೇಡ್ ರಸ್ತೆಗೆ ಬರ್ತಾರೆ. ಅದಕ್ಕಾಗಿ ಜನಜಂಗುಳಿಯನ್ನ ಹದ್ದುಬಸ್ತಿನಲ್ಲಿ ಇಡಲು ಕೇಂದ್ರ ವಿಭಾಗದ ಪೊಲೀಸ್ರು ಈ ಬಾರಿ ಕೆಲ ನಿಯಮಾವಳಿಗಳನ್ನ ಜಾರಿಗೆ ತಂದಿದ್ದಾರೆ. ಜೊತೆಗೆ ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿರುವ ಪಬ್ ಹಾಗೂ ಲೇಡಿಸ್ ಬಾರ್ ಗಳ ಬಗ್ಗೆ ನಿಗಾ ಇಡೋದಕ್ಕೆ ಶುರುಮಾಡಿದ್ದಾರೆ. ಅದೇ ರೀತಿ ಬೆಂಗಳೂರಿನ ಮೇಲೆ ಉಗ್ರರ ಕಣ್ಣು ಬಿದ್ದಿರೋದ್ರಿಂದ ಪೊಲೀಸ್ರು ಪ್ರತೀ ಏರಿಯಾದ ಲಾಡ್ಜ್ ಗಳಲ್ಲಿ ಬಂದು ನೆಲೆಸಿರೋ ವ್ಯಕ್ತಿಗಳ ಬಗೆಗೆ ಮಾಹಿತಿಯನ್ನ ಕಲೆಹಾಕೋದಕ್ಕೆ ಮುಂದಾಗಿದ್ದಾರೆ.
ಬೆಂಗಳೂರನ ಎಲ್ಲಾ ವಿಭಾಗದ ಪೊಲೀಸರಿಗಿಂತ ಕೇಂದ್ರ ವಿಭಾಗದ ಪೊಲೀಸ್ರು ಹೆಚ್ಚಿನ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. ಒಟ್ಟಾರೆ ನಗರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲದಂತೆ ಹೊಸ ವರ್ಷದ ಆಚರಣೆಗೆ ಪೊಲೀಸ್ ಇಲಾಖೆಗೆ ಸರ್ವ ರೀತಿಯಲ್ಲೂ ಸಜ್ಜಾಗಿದೆ.