ಸ್ವಾಭಿಮಾನದಲ್ಲಿ ನಾವು ಯಾರಿಗಿಂತ ಕಡಿಮೆ ಇಲ್ಲ. ರಾಜಕೀಯ ಜೀವನದಲ್ಲಿ ನಾನು ಯಾರಿಗೂ ತಲೆ ಬಾಗಿಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಿಮಾನ ಬಿಟ್ಟು ನಾವು ರಾಜಕೀಯ ಮಾಡಲ್ಲ. ನಂಜನಗೂಡಿನ ಜನತೆ ಕೇಳಿದಾಗೆಲ್ಲ ಮತ ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. ಅಭಿವೃದ್ಧಿ ಕೆಲಸಗಳು, ನಿಮ್ಮ ಋಣ ತೀರಿಸುವ ಕೆಲಸಗಳಿಗೆ ಆದ್ಯತೆ ನೀಡುತ್ತೇವೆಯೇ ಹೊರತು ಸ್ವಾಭಿಮಾನಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮನೆ ಹಾಗೂ ಮನುಷ್ಯರನ್ನು ಒಡೆದು ಹಾಕುವ ಪಕ್ಷ. ಖಾಲಿ ಪಾತ್ರೆಯ ಸದ್ದು ಜಾಸ್ತಿ. ಆದರೆ, ತುಂಬಿರುವ ಪಾತ್ರೆ ಸದ್ದು ಮಾಡುವುದಿಲ್ಲ ಎಂದು ಟೀಕಿಸಿದರು.
ಕೆಲವರು ದಲಿತರ ಹೆಸರು ಹೇಳಿಕೊಂಡು ಬಿಜೆಪಿ ಪಕ್ಷಕ್ಕೆ ಹೋಗಿದ್ದಾರೆ. ಅಂತವರಿಗೆ ಕೋಮುವಾದಿ ಪಕ್ಷವೇ ಇಷ್ಟ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಿಡಿಕಾರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ