Select Your Language

Notifications

webdunia
webdunia
webdunia
webdunia

ಕೊನೆಗೂ ಹೊರಬಿತ್ತು ಬಿಬಿಎಂಪಿ ಚುನಾವಣಾ ದಿನಾಂಕ

ಕೊನೆಗೂ ಹೊರಬಿತ್ತು ಬಿಬಿಎಂಪಿ ಚುನಾವಣಾ ದಿನಾಂಕ
ಬೆಂಗಳೂರು , ಸೋಮವಾರ, 3 ಆಗಸ್ಟ್ 2015 (12:34 IST)
ಬಿಬಿಎಂಪಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರು ಅಧಿಕೃತವಾಗಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದಾರೆ. 
 
ನಗರದ 198 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿರುವ ಈ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಸಬಹುದಾಗಿದೆ. 
 
ಅಧಿಸೂಚನೆಯ ಪ್ರಕಾರ, ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು, ಆಗಸ್ಟ್ 10 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಲ್ಲದೆ 11ರಂದು ನಾಮಪತ್ರಗಳ ಪರಿಶೀಲನೆ ನಡೆಸಿ 13ರಂದು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗುತ್ತದೆ. ಅಂತಿಮವಾಗಿ ಆಗಸ್ಟ್ 22ರಂದು ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದಲ್ಲಿ ಆಗಸ್ಟ್ 24ರಂದು ನಡೆಸಲಾಗುತ್ತದೆ. 
 
ಇನ್ನು ಆಗಸ್ಟ್ 27ರಂದು ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. 34,10,168 ಮಹಿಳೆಯರೂ ಸೇರಿದಂತೆ ಒಟ್ಟು 71,80,027 ಮತದಾರರು ಮತದಾನ ಚಲಾಯಿಸಲಿದ್ದು, ಚುನಾವಣೆಯು 6733 ಮತಗಟ್ಟೆಗಳಲ್ಲಿ ನಡೆಯಲಿದೆ. 

Share this Story:

Follow Webdunia kannada