Webdunia - Bharat's app for daily news and videos

Install App

ವಸಿಷ್ಠ ಕೋ ಆಪರೇಟಿವ್ ಸೊಸೈಟಿಯನ್ನು ಕೂಡಲೇ ಸೂಪರ್ ಸೀಡ್

Webdunia
ಗುರುವಾರ, 7 ಅಕ್ಟೋಬರ್ 2021 (20:56 IST)
ಬೆಂಗಳೂರು: ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ ಬೆಳಕಿಗೆ ಬಂದು ಸುಮಾರು 6 ತಿಂಗಳು ಕಳೆದರೂ ಈ ರೀತಿಯ ಯಾವುದೇ ಪರಿಹಾರ ಸಿಕ್ಕಿಲ್ಲ. ಅಂತಹ ರಾಜ್ಯ ಸರ್ಕಾರ ತಕ್ಷಣವೇ ಸೊಸೈಟಿ ಸೂಪರ್ ಸೀಡ್ ಮಾಡಬೇಕು. ಇಂಡಿಪೆಂಡೆಂಟ್ ಸಂಸ್ಥೆಯಿಂದ ವಸಿಷ್ಠ ಸೊಸೈಟಿ ಆಡಿಟ್ ಮಾಡಬೇಕು ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ್ ಗುಹಾ ದ್ವಾರಕನಾಥ್ ಆಗ್ರಹಿಸಿದರು.
 
ನಗರದ ಪ್ರೆಸ್ ಕ್ಲಬ್ ನಲ್ಲಿ ವಂಚನೆಗೆ ಒಳಗಾದ ಹೂಡಿಕೆದಾರರಿಂದ ಸುದ್ದಿಗೋಷ್ಠಿ ನೆಡೆಯಿತು. ಈ ವೇಳೆ ಮಾತನಾಡಿದ ದ್ವಾರಕನಾಥ್ ಬೆಂಗಳೂರಿನ ಹನುಮಂತ ನಗರದಲ್ಲಿರುವ ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಗರಣವು ಬೆಳಕಿಗೆ ಬರುತ್ತದೆ ಮತ್ತು ಸುಮಾರು 6 ತಿಂಗಳು ಕಳೆದರೂ ಗ್ರಾಹಕರಿಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಈ ಸೊಸೈಟಿಯಲ್ಲಿ ಥೇವಣಿ ಇಟ್ಟಿರುವವರಲ್ಲಿ 70 ವರ್ಷ ಮೇಲಾಗುವವರ ಸಂಖ್ಯೆ. ಹಿರಿಯ ನಾಗರೀಕರು ತಮ್ಮ ಹಣ ವಾಪಸ್ ಸಿಗುತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ವಸಿಷ್ಠ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ಪ್ರಕ್ರಿಯೆ. ಬ್ಯಾಂಕ್ ಅಧ್ಯಕ್ಷರೇ ತಮ್ಮ ಕುಟುಂಬಕ್ಕೆ 100 ಕೋಟಿಗೂ ಹೆಚ್ಚಿನ ಸಾಲದ ಮೊತ್ತ. ಬ್ಯಾಂಕ್ ಅಧ್ಯಕ್ಷರ ಮಗನ ಹೆಸರಲ್ಲೇ ಅನೇಕ ರೀತಿಯ ಲೋನ್ ಗಳಿಕೆ ಕಡಿಮೆಯಾಗಿದೆ. ನೂರಾರು ಕೋಟಿ ಲೋನ್ ನೀಡಿದರೂ, ಯಾವುದೇ ದಾಖಲೆಗಳನ್ನು ಪಡೆದಿಲ್ಲ. ಹನುಮಂತ ನಗರ ಬ್ಯಾಂಕ್ ಕಟ್ಟಡದಲ್ಲಿರುವ ಇರೋ ಚಿಕ್ಕ ಪ್ರಿಂಟಿಂಗ್ ಕಚೇರಿಗೆ ಸುಮಾರು 37 ಕೋಟಿ ಲೋನ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
 
ಸುಮಾರು 450 ಕೋಟಿ ರೂಪಾಯಿಯ ಈ ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 30 ರಂದು  ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರನ್ನು ಸೇರಿಸಿ ವ್ಯವಸ್ಥಾಪಕ ಮಂಡಳಿಯ ಎಲ್ಲಾ ಸದಸ್ಯರಿಗೂ ನೋಟಿಸ್ ಜಾರಿ ಆಗಿರುತ್ತದೆ. ಈ ನೋಟಿಸಿನ ಸೆಕ್ಷನ್ ನಂ.21 ರಲ್ಲಿ ಉಲ್ಲೇಖಿಸಿರುವಂತೆ ಕೋಟ್ಯಂತರ ರೂಪಾಯಿ ಹಣವನ್ನು ಸಾಲ ಖಾತೆಗಳಲ್ಲಿ ಸಾಲಗಾರರ ಅರ್ಜಿಯು ಇಲ್ಲದೆ ಸಾಲ ನೀಡಿರುವುದು, ಸಾಲಗಾರರ ಆಸ್ತಿಯು ಆಧಾರವಾಗಿಟ್ಟುಕೊಳ್ಳದೆ ಸಾಲ ನೀಡಿರುವುದು. ಯಾವುದೇ ದಾಖಲಾತಿಗಳಿಲ್ಲದೆ ಸಾಲ ನೀಡಿರುವುದು ವ್ಯವಸ್ಥಾಪಕ ಮಂಡಳಿಯ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಶಂಕರ್ ಗುಹಾ ವಿವರಿಸಿದರು.
 
ಠೇವಣಿದಾರರು ಕಷ್ಟಪಟ್ಟು ತಮ್ಮ ಜೀವಮಾನವಿಡೀ ದುಡಿದ ಹಣವನ್ನು ಈ ರೀತಿ ತಮಗೆ ಅನುಕೂಲವಾಗುವವರಿಗೆ ಸಾಲ ನೀಡಿ ಗ್ರಾಹಕರ ನಂಬಿಕೆಗೆ ದ್ರೋಹ ಮಾಡಲಾಗಿದೆ.  ಈ ಹಗರಣದ ತನಿಖೆಯನ್ನು ಸಿಐಡಿ ವಹಿಸಲಾಗಿದೆ. ಈ ಹಿಂದೆ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣವನ್ನು ಸಹ ಸಿಐಡಿಗೆ ನೀಡಿದ್ದನ್ನು ಗಮನಿಸಬಹುದು. ಆದರೆ ಆ ಪ್ರಕರಣದಂತೆ ಇದು ಸಹ ರಾಜಕೀಯ ಒತ್ತಡಗಳಿಂದಾಗಿ ಸರಿಯಾದ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಕೂಡಲೇ ಸಿಬಿಐ ಬ್ಯಾಂಕ್ ಫ್ರಾಡ್ಸ್ ಇನ್ವೆಸ್ಟಿಗೇಶನ್ ಗೆ ವಹಿಸಬೇಕು ಎಂದು ಆಗ್ರಹಿಸಿದರು.
 
ನಮ್ಮ ರಾಜ್ಯದ ಪೊಲೀಸರ ಬಗ್ಗೆ ನಂಬಿಕೆ ಮತ್ತು ಗೌರವವನ್ನು ಹೊಂದಿದ್ದರೂ ಆಡಳಿತ ಪಕ್ಷದ ಒತ್ತಡ ಹೇರಿ ಕೆಲಸಕ್ಕೆ ಅಡ್ಡಿಪಡಿಸುವ ಅವಕಾಶ ಇದರ ಜೊತೆಗೆ ಸೊಸೈಟಿಯ ಇಂಡಿಪೆಂಡೆಂಟ್ ಆಡಿಟಿಂಗ್ ನಡೆಸಬೇಕು ಮತ್ತು ಸೊಸೈಟಿಯನ್ನು ಸೂಪರ್ಸೀಡ್ ಮಾಡಬೇಕು ಎಂದು ವಂಚನೆಗೆ ಒಳಗಾದವರ ಪರವಾಗಿ ಡಾ.ಶಂಕರ್ ಗುಹಾ ದ್ವಾರಕನಾಥ್ ಒತ್ತಾಯಿಸಿದರು.
ವಾಸಿಸ್ತಾ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments