Select Your Language

Notifications

webdunia
webdunia
webdunia
webdunia

ಹಬ್ಬಳ್ಳಿಯಲ್ಲಿಯೇ ಐಐಟಿ ಸ್ಥಾಪನೆ: ದಿನೇಶ್ ಗುಂಡೂರಾವ್

ಹಬ್ಬಳ್ಳಿಯಲ್ಲಿಯೇ ಐಐಟಿ ಸ್ಥಾಪನೆ: ದಿನೇಶ್ ಗುಂಡೂರಾವ್
ಹುಬ್ಬಳ್ಳಿ , ಶುಕ್ರವಾರ, 24 ಏಪ್ರಿಲ್ 2015 (13:21 IST)
ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿರುವ ಐಐಟಿ ಕೇಂದ್ರವನ್ನು ಹುಬ್ಬಳ್ಳಿಯಲ್ಲೇ ತೆರೆಯಬೇಕು ಎಂಬ ಅಭಿಪ್ರಾಯ ಹಾಗೂ ಒತ್ತಡಗಳು ಸರ್ಕಾರದ ಕಡೆ ಮುಖ ಮಾಡಿವೆ ಎಂದು ನಾಗರೀಕ ಮತ್ತು ಆಹಾರ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. 
 
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಐಟಿಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೇ ತೆರೆಯಲು ಸರ್ಕಾರ ಮುಂದಾಗಬೇಕು ಎಂಬ ಸಾಕಷ್ಟು ಅಭಿಪ್ರಾಯಗಳು ಸರ್ಕಾರದ ಮೇಲೆ ಪರಿಣಾಮ ಬೀರುತ್ತಿವೆ ಎಂದರು.
 
ಇದೇ ವೇಳೆ, 2015 ಮತ್ತು 16ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಬೇಕಿದ್ದ ಅನುದಾನ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಕ್ಷಪಾತತೆಯನ್ನು ಎಸಗಿದೆ. ಇದರಿಂದ ಬರಬೇಕಿದ್ದ ಅನುದಾನ ಕಡಿತಗೊಂಡಿದೆ. ಈ ಸಂಬಂಧ ನಾವು ಬಹಿರಂಗವಾಗಿ ಚರ್ಚೆಗಿಳಿಯಲು ಸಿದ್ಧರಿದ್ದೇವೆ. ಕೇಂದ್ರ ರಾಜ್ಯಕ್ಕೆ ಅಗತ್ಯ ಹಾಗೂ ಸಮರ್ಪಕ, ನಿಸ್ಪಕ್ಷಪಾತ ಅನುದಾನ ನೀಡಿದೆ ಎಂದಾದಲ್ಲಿ ಬಿಜೆಪಿ ನಾಯಕರು ಬಹಿರಂಗ ಸಬೆಗೆ ಆಗಮಿಸಲಿ ಎಂದು ಸವಾಲೆಸೆದರು. 
 
ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತ್ಯೇಕ ರಾಜ್ಯವನ್ನು ಸೃಷ್ಟಿಸುವ ಹುನ್ನಾರಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದ ಅವರು, ಆ ಸಂಬಂಧ ಪ್ರತಿಕ್ರಿಯಿಸುವವರನ್ನು ರಾಜ್ಯದಿಂದಲೇ ಬಹಿಷ್ಕರಿಸಬೇಕು ಎಂದು ಗುಡುಗಿದರು. ಅಲ್ಲದೆ ತಮ್ಮದೇ ಪಕ್ಷದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರೂ ಕೂಡ ಈ ಸಂಬಂಧ ತಕಾರವೆತ್ತಿದ್ದರು. ಇಂತಹ ಹೇಳಿಕೆಗಳನ್ನು ಯಾರೇ ನೀಡಿದರೂ ಕೂಡ ಅದು ಕೇವಲ ಸ್ವಾರ್ಥಕ್ಕಾಗಿ ಮಾತ್ರ ಎಂದರು. ಅಲ್ಲದೆ ನಡಹಳ್ಳಿ ವಿರುದ್ಧ ಪಕ್ಷವು ಸೂಕ್ತ ಕ್ರಮ ಜರುಗಿಸುತ್ತಿದೆ ಎಂದರು. 
 
ಈ ಹಿಂದೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ದೇವರಹಿಪ್ಪರಗಿ ವಿಧಾಸಭಾ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಸರ್ಕಾರ ಉತ್ತರ ಕರ್ನಾಟಕ ಬಾಗದ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಲ್ಲಿ ಸರ್ಕಾರವು ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂಬ ಬೇಧಭಾವವನ್ನು ಎಸಗುತ್ತಿದೆ. ಆದ್ದರಿಂದ ನಮಗೆ ಪ್ರತ್ಯೇಕ ರಾಜ್ಯದ ಅವಶ್ಯಕತೆ ಇದ್ದು, ಅಭಿವೃದ್ಧಿಗಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕಗೊಳಿಸುವ ಅಗತ್ಯವಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಪ್ರತ್ಯೇಕತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

Share this Story:

Follow Webdunia kannada