Select Your Language

Notifications

webdunia
webdunia
webdunia
webdunia

ತಮಿಳುನಾಡಿಗೆ ನೀರಿನ ಸಮಸ್ಯೆ ಇದ್ರೆ ಡ್ಯಾಂ ಕಟ್ಟಿಕೊಳ್ಳಲಿ: ಸಚಿವ ಜಯಚಂದ್ರ ಕಿಡಿ

ತಮಿಳುನಾಡಿಗೆ ನೀರಿನ ಸಮಸ್ಯೆ ಇದ್ರೆ ಡ್ಯಾಂ ಕಟ್ಟಿಕೊಳ್ಳಲಿ: ಸಚಿವ ಜಯಚಂದ್ರ ಕಿಡಿ
ಬೆಂಗಳೂರು , ಮಂಗಳವಾರ, 30 ಆಗಸ್ಟ್ 2016 (14:03 IST)
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆಯಿರುವುದರಿಂದ ಯಾವುದೇ ಕಾರಣಕ್ಕೂ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕಾನೂನು ಖಾತೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
 
ತಮಿಳುನಾಡಿಗೆ ನೀರಿನ ಸಮಸ್ಯೆ ಇದೆ ಎಂದಾದಲ್ಲಿ ಅವರೇ ಡ್ಯಾಂ ಕಟ್ಟಿಕೊಳ್ಳಲಿ. ಪದೇ ಪದೇ ಸುಪ್ರೀಂಕೋರ್ಟ್ ಹೋಗುವುದರ ಬಗ್ಗೆ ಬುದ್ದಿ ಹೇಳಿದೆ. ಗ್ರೌಂಡ್ ವಾಟರ್ ಸಂಪೂರ್ಣ ಬರಿದಾಗಿದೆ. ರಾಜ್ಯದ ಅನೇಕ ಜಲಾಶಯಗಳು ನೀರಿಲ್ಲದೆ ಬರಿದಾಗಿವೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
 
ರಾಜ್ಯದಲ್ಲಿರುವ ಮೂರು ಸಾವಿರಕ್ಕೂ ಹೆಚ್ಚು ಕೆರೆಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ತಮನಿಳುನಾಡಿಗೆ ನೀರು ಬಿಡುವುದಾದರೂ ಹೇಗೆ? ತಮಿಳುನಾಡಿನಲ್ಲಿ ಮಳೆ ಆರಂಭವಾಗಿದೆ. ದೇವರ ದಯೆಯಿಂದ ಉತ್ತಮ ಮಳೆಯಾದಲ್ಲಿ ನೀರಿನ ಅಭಾವ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸರಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಹೇಳಿಲ್ಲ. ಜಲಾಶಯಗಳಲ್ಲಿ ನೀರಿನ ಕೊರತೆಯಿದೆ ಎಂದು ತಿಳಿಸಿದ್ದಾಗಿ ಸಚಿವ ಟಿ.ಬಿ,ಜಯಚಂದ್ರ ಸ್ಪಷ್ಟಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ನಂತ್ರ ಪುದುಚೇರಿ ಕ್ಯಾತೆ