Select Your Language

Notifications

webdunia
webdunia
webdunia
webdunia

ರಮ್ಯಾ ದೇಶದ್ರೋಹಿಯಾದರೆ ಪ್ರಧಾನಿ ಮೋದಿ ಸಹ ದೇಶದ್ರೋಹಿ: ಬಿ.ಆರ್.ಪಾಟೀಲ್

ರಮ್ಯಾ ದೇಶದ್ರೋಹಿಯಾದರೆ ಪ್ರಧಾನಿ ಮೋದಿ ಸಹ ದೇಶದ್ರೋಹಿ: ಬಿ.ಆರ್.ಪಾಟೀಲ್
ಬೆಂಗಳೂರು , ಮಂಗಳವಾರ, 23 ಆಗಸ್ಟ್ 2016 (16:25 IST)
ನಟಿ ರಮ್ಯಾ ಹೇಳಿಕೆ ದೇಶದ್ರೋಹ ಎಂದರೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ದೇಶದ್ರೋಹಿ ಎಂದು ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಪಾಕಿಸ್ತಾನ ಪರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಅವರು ರಮ್ಯಾ ಪರ ಬ್ಯಾಟಿಂಗ್ ಮಾಡಿದ್ದಾರೆ.
 
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಕೆಟ್ಟ ಜನರಿದ್ದಾರೆ. ಹಾಗಂತ ಪಾಕಿಸ್ತಾನದ ಎಲ್ಲ ಜನರು ಕೆಟ್ಟವರಲ್ಲ. ಒಳ್ಳೆಯವರೂ ಇದ್ದಾರೆ ಎಂಬುದ ನಟಿ ರಮ್ಯಾ ಅವರ ಮಾತಿನ ಅರ್ಥವಾಗಿತ್ತು ಎಂದು ಹೇಳಿದರು. 
 
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಹೀಗಾಗಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.
 
ಪಾಕಿಸ್ತಾನ ನರಕವೆಂದು ಕೇಂದ್ರ ಸಚಿವ ಮನೋಹರ ಪರಿಕ್ಕರ್ ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತೆರಳಿ ನವಾಜ್ ಶರೀಫ್‌ ಮೊಮ್ಮಗಳ ವಿವಾಹ ಸಮಾರಂಭದಲ್ಲಿ ಭಾಗಿಯಾದ ಕುರಿತು ಉತ್ತರ ನೀಡಲಿ ಎಂದು ಟಾಂಗ್ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರ ವಿರುದ್ಧದ ದೌರ್ಜನ್ಯಗಳು ಖಂಡನಾರ್ಹ: ಎಲ್‌,ಕೆ.ಆಡ್ವಾಣಿ