Select Your Language

Notifications

webdunia
webdunia
webdunia
webdunia

ನಾನು ಸೆಕೆಂಡ್ ಹ್ಯಾಂಡ್‌ ಗಿರಾಕಿಯಲ್ಲ: ಕುಮಾರಸ್ವಾಮಿ

ನಾನು ಸೆಕೆಂಡ್ ಹ್ಯಾಂಡ್‌ ಗಿರಾಕಿಯಲ್ಲ: ಕುಮಾರಸ್ವಾಮಿ
ಬೆಂಗಳೂರು , ಶನಿವಾರ, 6 ಫೆಬ್ರವರಿ 2016 (12:12 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಚ್ ಮತ್ತು ಕನ್ನಡಕವನ್ನು ಖರೀದಿಸಲು ನಾನು ಸೆಕೆಂಡ್ ಹ್ಯಾಂಡ್ ಗಿರಾಕಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮಲ್ಲಿರುವ ಕನ್ನಡಕವನ್ನು 50 ಸಾವಿರ ರೂಪಾಯಿಗಳಿಗೆ ಹಾಗೂ ವಾಚ್‌ನ್ನು 10 ಲಕ್ಷ ರೂಪಾಯಿಗಳಿಗೆ ಯಾರು ಬೇಕಾದರೂ ಖರೀದಿಸಬಹುದು ಎಂದು ಹೇಳಿಕೆ ನೀಡಿದ್ದರು.
 
ಆದರೆ, ಜೆಡಿಎಸ್ ಮುಖ್ಯಸ್ಥ ಕುಮಾರಸ್ವಾಮಿ ನಿಮ್ಮ ಕನ್ನಡಕ 1.4 ಲಕ್ಷ ರೂಪಾಯಿ ಮತ್ತು ವಾಚ್ 50 ಲಕ್ಷ ರೂಪಾಯಿ ಬೆಲೆಬಾಳುವಂತಹದ್ದು ಎಂದು ತಿರುಗೇಟು ನೀಡಿದ್ದರು. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ 50 ಸಾವಿರ ಕೊಟ್ಟು ಕನ್ನಡಕ ಮತ್ತು 10 ಲಕ್ಷ ರೂಪಾಯಿ ಕೊಟ್ಟು ಕುಮಾರಸ್ವಾಮಿಯೇ ಖರೀದಿಸಲಿ ಎಂದು ತಿರುಗೇಟು ನೀಡಿದ್ದರು. 
 
ಇಂದು ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಲು ನಾನು ಸೆಕೆಂಡ್ ಹ್ಯಾಂಡ್ ಗಿರಾಕಿಯಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada