Select Your Language

Notifications

webdunia
webdunia
webdunia
webdunia

ನಾನು ಬಡವರು, ಶೋಷಿತರ ಪರ, ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ: ಸಚಿವ ಅಂಜನೇಯ

ನಾನು ಬಡವರು, ಶೋಷಿತರ ಪರ, ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ: ಸಚಿವ ಅಂಜನೇಯ
ಬೆಂಗಳೂರು , ಸೋಮವಾರ, 30 ಮೇ 2016 (19:05 IST)
ನಾನು ಬಡವರು, ಶೋಷಿತರು ಮತ್ತು ದಲಿತರ ಪರವಾಗಿದ್ದೇನೆ. ನನ್ನು ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಾಗದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ಹೇಳಿದ್ದಾರೆ.
 
ಬೆಂಗಳೂರಿನ ಮಹಾರಾಣಿ ಕಾಲೇಜಿನ ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ವಸತಿ ನಿಲಯದಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿದ್ದು, 15 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
 
ನಾನು ಸಮಾಜದಲ್ಲಿರುವ ಬಡವರು, ಶೋಷಿತರು ಮತ್ತು ದಲಿತರ ಪರವಾಗಿ ಧ್ವನಿ ಎತ್ತುತ್ತೇನೆ. ನನ್ನು ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. 
 
ಕೇಂದ್ರ ಸರಕಾರ ಎರಡು ವರ್ಷ ಅಧಿಕಾರಾವಧಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾರಂಭವನ್ನು ಕೈಗೊಂಡಿದೆ. ದೇಶ ಬರಗಾಲದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಸಮಾರಂಭಗಳು ಆಯೋಜಿಸುವುದು ಸೂಕ್ತವೇ ಎಂದು ಕೇಂದ್ರ ಸರಕಾರದ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ವಾಗ್ದಾಳಿ ನಡೆಸಿದರು.
 
ಈ ದೇಶವನ್ನು ಕಟ್ಟಿ ಬೆಳೆಸಿರುವುದೇ ಕಾಂಗ್ರೆಸ್, ಬಡವರು ವಿದ್ಯಾರ್ಥಿಗಳಿಗೆ ಸೌಲಭ್ಯವನ್ನು ಒದಗಿಸಿರುವುದು ಕಾಂಗ್ರೆಸ್ ಸರಕಾರ ಮಾತ್ರ. ಅಷ್ಟೇ ಯಾಕೆ ನೀವು ಕ್ಯಾಮೆರಾ ಹಿಡಿದು ಸುದ್ದಿ ಮಾಡುತ್ತಿರಿ ಅದಕ್ಕೂ ಸಹ ಕಾಂಗ್ರೆಸ್ ಸರಕಾರವೇ ಕಾರಣವೆಂದು ಮಾಧ್ಯಮ ಮಿತ್ರರಿಗೆ ಚಟಾಕಿ ಹಾರಿಸಿದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಕೀಯ ಸೀಟು ಹಂಚಿಕೆ: ಸರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಚರ್ಚೆ ವಿಫಲ