ಯಡಿಯೂರಪ್ಪ ಅಲ್ಲ, ಯಾರೇ ಸ್ಪರ್ಧಿಸಿದರು ಹೆದರುವುದಿಲ್ಲ: ಸಚಿವೆ ಉಮಾಶ್ರೀ

Webdunia
ಬುಧವಾರ, 27 ಸೆಪ್ಟಂಬರ್ 2017 (15:58 IST)
ಕಲಬುರ್ಗಿ: ಯಡಿಯೂರಪ್ಪ ಅಲ್ಲ ಬೇರೆ ಯಾರೇ ಬಲಿಷ್ಠ ನಾಯಕರು ಸ್ಪರ್ಧಿಸಿದರು ಹೆದರುವುದಿಲ್ಲ. ಓಡಿ ಹೋಗುವುದು ಕಾಂಗ್ರೆಸ್ ಅಥವಾ ಉಮಾಶ್ರೀ ಜಾಯಮಾನದಲ್ಲಿ ಇಲ್ಲ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಎದುರಾಳಿ ಯಾರೇ ಆದರೂ ತೆರದಾಳ ಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ. 2008ರ ಚುನಾವಣೆಯಲ್ಲಿ ಉಮಾಶ್ರೀ ಗೆಲುವು ಸಾಧಿಸಿದರೆ ಅವರು ಕ್ಷೇತ್ರದಲ್ಲಿ ಇರುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಆದರೂ ಅಲ್ಲಿಯೇ ಇದ್ದು ಗೆಲುವು ಸಾಧಿಸಿ ತೋರಿಸಿದ್ದೇನೆ. ಸೋಲು ಗೆಲುವು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮಲ್ಲಿದೆ. ಅಂಜಿಕೆ ಅಳಕು ನಮ್ಮಲ್ಲಿಲ್ಲ. ಯಾರೇ ಸ್ಪರ್ಧಿಸಿದರೂ ಹೆದರುವುದಿಲ್ಲ ಎಂದು ಹೇಳಿದರು.

ಅ.2 ರಂದು ರಾಜ್ಯದಾದ್ಯಂತ ಮಾತೃಪೂರ್ಣ ಯೋಜನೆ ಜಾರಿ ತರಲಾಗುತ್ತಿದೆ. ಯೋಜನೆ ಅಡಿ ಸುಮಾರು 10 ಲಕ್ಷ ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 102 ಕೋಟಿ ಹಣ ಮೀಸಲು ಇಟ್ಟಿರುವುದಾಗಿ ತಿಳಿಸಿದರು.

ನವೆಂಬರ್ 1 ಅಥವಾ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಾಡಗೀತೆ ಅವಧಿ ಕಡಿತಗೊಳ್ಳಲಿದೆ. ಈಗಾಗಲೇ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದೆ. ಈ‌ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಎರಡು ನಿಮಿಷಗಳ ಅವಧಿಯ ನಾಡಗೀತೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಮಾಶ್ರೀ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಾಳೆ ಸಾಯ್ತೀನಿ ಅಂದ್ರೂ ಬೇಜಾರಿಲ್ಲ ಎಂದಿದ್ದ ಸಿಜೆ ರಾಯ್

ಕರ್ನಾಟಕದಲ್ಲಿ ಇನ್ ಸ್ಟಾಗ್ರಾಂ, ಫೇಸ್ ಬುಕ್ ಬ್ಯಾನ್: ಯಾರಿಗೆ, ಇಲ್ಲಿದೆ ಶಾಕಿಂಗ್ ಸುದ್ದಿ

ಮದುವೆ ಮಂಟಪದಲ್ಲೇ ಜೋಡಿಯದ್ದು ಕಿಸ್, ಮುದ್ದಾಟ: ಪುರೋಹಿತರು ಮಾಡಿದ್ದೇನು video

ಮುಂದಿನ ಸುದ್ದಿ
Show comments