Webdunia - Bharat's app for daily news and videos

Install App

ಶೋಭಾ ಕರಂದ್ಲಾಜೆ ಅವರಿಂದ ಪಾಠ ಕಲಿಯಬೇಕಾಗಿಲ್ಲ: ಸಿದ್ದರಾಮಯ್ಯ

Webdunia
ಭಾನುವಾರ, 28 ಸೆಪ್ಟಂಬರ್ 2014 (13:29 IST)
ಚರ್ಚ್‌ ದಾಳಿ ಹಾಗೂ ಹೆಚ್ಚಿನ ಪ್ರಮಾಣದ ಕೋಮು ಸಂಘರ್ಷ ನಡೆದಿರುವುದು ಬಿಜೆಪಿ ಕಾಲದಲ್ಲೇ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕರಂದ್ಲಾಜೆ ಅವರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
 
ಹಿಂದಿನಿಂದಲೂ ಮಡೆಸ್ನಾನ ನಿಲ್ಲಿಸಬೇಕು ಎಂಬುದು ರಾಜ್ಯ ಸರಕಾರದ ನಿಲುವು. ಮಡೆಸ್ನಾನ ಅಥವಾ ಎಡೆಸ್ನಾನ ಮಾಡುವುದು ಸರಿಯಲ್ಲ. ದೇವರ ಪ್ರಸಾದ ತಿನ್ನಲಷ್ಟೆ. ಅದರ ಮೇಲೆ ಉರುಳಲಲ್ಲ. ಈ ವಿಚಾರದಲ್ಲಿ ವಿವಾದ ಅನಗತ್ಯ. ಈ ವಿಚಾರದಲ್ಲಿ ನ್ಯಾಯಾಲಯದ ಆದೇಶದಂತೆ ರಾಜ್ಯ ಸರಕಾರ ನಡೆದುಕೊಳ್ಳಲಿದೆ ಎಂದರು. 
 
ರಾಜ್ಯದಲ್ಲಿ ಕೆಲವು ಘಟನೆಗಳು ನಡೆದಿವೆ ನಿಜ. ಕಾನೂನು ಸುವ್ಯವಸ್ಥೆ ಹಾಳುಗೆಡವುವವರು ಯಾವುದೇ ಜಾತಿ, ವರ್ಗ, ಸಂಘಟನೆಗಳಿಗೆ ಸೇರಿರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಚರ್ಚ್‌ ಮೇಲಿನ ದಾಳಿ ಕುರಿತು ಸೋಮಶೇಖರ್‌ ಆಯೋಗ ಸಲ್ಲಿಸಿರುವ ವರದಿಯನ್ನು ಕಾನೂನು ಇಲಾಖೆಗೆ ಒಪ್ಪಿಸಿದ್ದು, ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು. 
 
ರಾಜ್ಯದಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೇ.50-50 ಭಾಗ ನೀಡಬೇಕು ಎಂಬ ರೈಲ್ವೆ ಇಲಾಖೆಯ ನಿಲುವಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿಲ್ಲ. ಯೋಜನೆಗಳಿಗೆ ಅವಶ್ಯವಿರುವ ಭೂಮಿ ನೀಡುತ್ತೇವೆ. ನಮ್ಮ ರಾಜ್ಯದವರೇ ರೈಲ್ವೆ ಸಚಿವರಾಗಿದ್ದಾರೆ. ಯೋಜನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದರು. 
 
ಸರಕಾರಿ ಭೂಮಿ ಕಬಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎ.ಟಿ.ರಾಮಸ್ವಾಮಿ ಹಾಗೂ ದೊರೆಸ್ವಾಮಿ ಅವರು ಸತ್ಯಾಗ್ರಹ ಮಾಡುತ್ತಿರುವ ಬಗ್ಗೆ ಉತ್ತರಿಸಿದ ಮುಖ್ಯಮಂತ್ರಿ, ಈಗಾಗಲೇ ದೊರೆಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಎಲ್ಲವನ್ನೂ ವಿವರಿಸಿದ್ದೇನೆ ಎಂದರು. 
 
ಮುಜರಾಯಿ ದೇವಾಲಯದಲ್ಲಿ ಮಹಿಳಾ ಅರ್ಚಕಿಯರ ನೇಮಕ 
 
ಮಂಗಳೂರು: ಸರಕಾರದ ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳಾ ಅರ್ಚಕಿಯರನ್ನು ಪ್ರಾಯೋಗಿಕವಾಗಿ ಕೆಲವು ದೇವಸ್ಥಾನಗಳಲ್ಲಿ ನೇಮಕ ಮಾಡುವ ಸಂಬಂಧ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ-2014 ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕುದ್ರೋಳಿಯಲ್ಲಿ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಸಾಮಾಜಿಕ ಬದಲಾವಣೆ ನಡೆದಿದ್ದು, ಅರ್ಚಕರಾಗಿ ವಿಧವೆಯರ ನೇಮಕ ಮಾಡಿರುವುದು ಸಂತೋಷದ ವಿಚಾರ. ಮಹಿಳಾ ಅರ್ಚಕಿಯರ ನೇಮಕದ ಬಗ್ಗೆ ಸರ್ಕಾರವೂ ಚಿಂತಿಸಲಿದೆ ಎಂದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments