Webdunia - Bharat's app for daily news and videos

Install App

ಕ್ರೌರ್ಯ ಮೆರೆದು 'ಕಾಗೆ' ಹಾರಿಸಿದ ಬಿಜೆಪಿ ಶಾಸಕ!

Webdunia
ಸೋಮವಾರ, 9 ಜನವರಿ 2017 (12:23 IST)
ಕಾಂಗ್ರೆಸ್ ನಾಯಕ ವಿವೇಕ ಶೆಟ್ಟಿ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆ ಹಾರಿಸಿದ್ದಾರೆ.
 
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಯುವ ನಾಯಕ ವಿವೇಕ ಶೆಟ್ಟಿ ನನಗೆ ಪರಿಚಯಸ್ಥ. ಆದರೆ, ಆತನ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಎಪಿಎಂಸಿ ಚುನಾವಣಾ ಪ್ರಚಾರದಲಿದ್ದೇನೆ. ನನ್ನ ತೇಜೋವಧೆಗಾಗಿ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.
 
ಫೇಸ್‌ಬುಕ್‌ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕನ ಮನೆಗೆ ನುಗ್ಗಿ ಬಿಜೆಪಿ ಶಾಸಕ ರಾಜು ಕಾಗೆ ಪುತ್ರಿ ಹಾಗೂ ಟೀಂ ಡೆಡ್ಲಿ ಅಟ್ಯಾಕ್ ಮಾಡಿದ ಘೋರ ಕೃತ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಉಗಾರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿತ್ತು. 
 
ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರ ರೌಡಿ ಗ್ಯಾಂಗ್, ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಕಾಂಗ್ರೆಸ್ ನಾಯಕ ವಿವೇಕ ಶೆಟ್ಟಿ ಮನೆಗೆ ನುಗ್ಗಿ ಮಹಿಳೆ ಮಕ್ಕಳು ಎನ್ನುವುದನ್ನು ನೋಡದೆ ಅಟ್ಟಹಾಸ ಮೆರೆದಿದ್ದು, ಈ ಭೀಭತ್ಸ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
 
ಶಾಸಕ ರಾಜು ಕಾಗೆ ಪುತ್ರಿ ಪ್ರತೀಕ್ಷಾ ಜೊತೆಗೆ 11 ಜನರ ರೌಡಿ ತಂಡ ಏಕಾಏಕಿ ಕಾಂಗ್ರೆಸ್ ನಾಯಕ ವಿವೇಕ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ವಿವೇಕ ಶೆಟ್ಟಿಯನ್ನು ಗ್ರಾಮಸ್ಥರ ಎದುರೇ ರಸ್ತೆಗೆ ಎಳೆತಂದು ಕತ್ತು ಹಿಸುಕಿ ಕೊಲೆ ಮಾಡಲು ಸಹ ಯತ್ನಿಸಿದ್ದ ದೃಶ್ಯಗಳು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಗೀನ ಮಕ್ಕಳಿಗೆ ಬುದ್ದಿ ಹೇಳುವುದು ಕಷ್ಟ, ಮೊಬೈಲ್ ಗೀಳು ಬಿಡು ಎಂದಿದ್ದಕ್ಕೆ ಯುವತಿ ಹೀಗೇ ಮಾಡೋದಾ

ಪಾಕ್‌ಗೆ ನುಗ್ಗಿ ಹೊಡೆಯಿರಿ: ಅಮಿತ್ ಶಾ ಬಳಿ ಇದನ್ನೇ ಹೇಳಿದ್ದೇನೆ ಎಂದ ಸಚಿವ ಸಂತೋಷ್‌ ಲಾಡ್‌

ಇಂದಿರಾಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಸಿದ್ದರಾಮಯ್ಯರನ್ನು ಉಚ್ಛಾಟಿಸುವ ಧಮ್‌ ಇದ್ಯಾ: ಡಿಕೆಶಿಗೆ ಅಶೋಕ್‌ ಸವಾಲು

ಗಡಿಯಲ್ಲಿ ಮತ್ತೆ ಪಾಕ್‌ ಕಿರಿಕ್‌: ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ

ಮುಂದಿನ ಸುದ್ದಿ
Show comments