ಶಾಸಕರ ಸಭೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಬೆಂಗಳೂರು ಶಾಸಕರು ನಾಳೆ ಎಲ್ಲರೂ ಸಿಎಂ ಭೇಟಿ ಮಾಡಲಿದ್ದಾರೆ.ಹಿಂದೆ ಆದ ತಾರತಮ್ಯ ಚರ್ಚೆ ಮಾಡ್ತೀವಿ.ಫೈನಾಶಿಯಲ್ ಬಗ್ಗೆ ಚರ್ಚೆಯಾಗಲಿದೆ.ಕ್ಷೇತ್ರದ ವಿಚಾರ ಚರ್ಚೆ ಮಾಡ್ತೀವಿ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನೂ ಕಂಟ್ರಾಕ್ಟರ್‌ಗಳ ಆಣೆ ಪ್ರಮಾಣ ವಿಚಾರವಾಗಿ ನಾನು ಯಾವ ಗುತ್ತಿಗೆದಾರರ ನಿಗೂ ಉತ್ತರ ಕೊಡಲ್ಲ.ಯಾವ ಬಿಲ್ ವಿಚಾರವೂ ಗೊತ್ತಿಲ್ಲ.ನನಗೂ ಪ್ರಜ್ಞೆ ಇದೆ, ನನಗೂ ರಾಜಕಾರಣ ಗೊತ್ತಿದೆ.ಯಾವ ಕಾಂಟ್ರಾಕ್ಟರ್ ಹಿಂದೆ ಯಾರಿದ್ದಾರೆ ನನಗೂ ಗೊತ್ತಿದೆ.ಯಾವ ಬ್ಲಾಕ್ ಮೇಲ್ ನನ್ನ ಮುಂದೆ ನಡೆಯಲ್ಲ.ನಾವು ವಿಪಕ್ಷ ಇದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರ್ತಿರಲಿಲ್ವಾ.?ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ.ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ.ಒಂದೇ ವಾರದಲ್ಲಿ ಹಣ ಬಿಡುಗಡೆ ಆಗುತ್ತಾ.?ಯಾವ ಪ್ರಜರ್ ಇದ್ರೂ ತಡೆದುಕೊಳ್ಳಲು ರೆಡಿ.ಯಾರಿಗೋ ಬ್ಲಾಕ್ ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ.ನನಗೆ ಥ್ರೆಟ್ ಮಾಡಿದ್ರೆ ಕೇಳ್ತೀನಾ.?ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ.ಲೆಟರ್ ಕೊಟ್ಟಿದ್ದು ಸತ್ಯ.ಅಶ್ವಥ್ ನಾರಾಯಣ್, ಬೊಮ್ಮಾಯಿ ಸೇರಿದಂತೆ ಎಲ್ಲರೂ ತನಿಖೆ ಮಾಡಿ ಅಂತ ಸದನದಲ್ಲಿ ಅಂದಿದ್ದು ಸತ್ಯ ಅಂತಾ ಡಿ ಕೆ ಶಿವಕುಮಾರ್ ಮಾತಲ್ಲಿ ತಿರುಗೇಟು ಕೊಟ್ಟಿದ್ದಾರೆ.