ಕಾಶ್ಮೀರ ಪ್ರತ್ಯೇಕತೆ ಬೆಂಬಲಿಸಿದ ಕಾರಣಕ್ಕೆ ಬಾಯ್‌ಕಾಟ್ ಹ್ಯುಂಡೈ ಟ್ರೆಂಡಿಂಗ್ ಟೀಕೆ, ಆಕ್ರೋಶ ಹೆಚ್ಚಾದಂತೆ ಸ್ಪಷ್ಟನೆ ನೀಡಿದ ಹ್ಯುಂಡೈ ಇಂಡಿಯಾ
ಭಾರತ ಎರಡನೇ ತವರು, ರಾಷ್ಟ್ರೀಯತೆಯನ್ನು ಗೌರವಿಸುತ್ತದೆ ಎಂದ ಹುಂಡ್ಯೈ*
ಕಾಶ್ಮೀರ ಪ್ರತ್ಯೇತಕತೆ ವಿಚಾರವಾಗಿ ಹೊತ್ತಿಕೊಂಡ ಟ್ವಿಟರ್ ಬೆಂಕಿಯಿಂದ ಇದೀಗ ಹ್ಯುಂಡೈ ಇಂಡಿಯಾ ಕ್ಷಮೆ(Hyundai India apology letter) ಕೇಳಿದೆ. ಪಾಕಿಸ್ತಾನ(Pakistan) ಹ್ಯುಂಡೈ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರ ಪ್ರತ್ಯೇಕಿಸುವ(Kashmir) ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಲಾಗಿತ್ತು. ಈ ಕುರಿತು ಹ್ಯುಂಡೈ ಇಂಡಿಯಾ ನಿಲುವ ಕೇಳಿದ ಭಾರತೀಯರ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಹೀಗಾಗಿ ಹ್ಯುಂಡೈ ಕಾರುಗಳನ್ನು ಬಹಿಷ್ಕರಿಸಿ(Boycott Hyundai) ಎಂಬ ಅಭಿಯಾನ ಇಂದು ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗಿತ್ತು. ಈ ಟ್ರೆಂಡಿಂಗ್ ಗಂಭೀರತೆ ಅರಿತ ಹ್ಯುಂಡೈ ಇಂಡಿಯಾ ಇದೀಗ ಕ್ಷಮೆ ಕೇಳಿದೆ.
ಟ್ವಿಟರ್ ಮೂಲಕ ಹ್ಯುಂಡೈ ಇಂಡಿಯಾ ಕ್ಷಮೆ ಕೇಳಿದೆ. ಹ್ಯುಂಡೈ ಮೋಟಾರ್ ಕಳೆದ 25 ವರ್ಷಗಳಿಂದ ಭಾರತದಲ್ಲಿ(India) ಕಾರ್ಯನಿರ್ವಹಿಸುತ್ತಿದೆ. ನಾವು ರಾಷ್ಟ್ರೀಯತೆಯನ್ನು ಗೌರವಿಸುವ(respecting nationalism) ಬಲವಾದ ನೀತಿ ಹೊಂದಿದ್ದೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಸ್ಟ್ ಹಾಗೂ ಚಟುವಟಿಕೆ ನಮ್ಮ ಬದ್ಧತೆಗೆ ವಿರುದ್ಧವಾಗಿದೆ. ಹ್ಯುಂಡೈ ಕಂಪನಿಗೆ ಭಾರತ ಎರಡನೇ ತವರು ನೆರವಾಗಿದೆ. ಹೀಗಾಗಿ ಸೂಕ್ಷ್ಮವಲಯದ ಕುರಿತ ಇಲ್ಲ ಸಲ್ಲದ ಮಾತಿಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ. ಅಂತಹ ಯಾವುದೇ ಮಾತು, ಹೇಳಿಕೆಯನ್ನು ಹ್ಯುಂಡೈ ಇಂಡಿಯಾ ಬಲವಾಗಿ ಖಂಡಿಸುತ್ತದೆ. ನಮ್ಮ ಬದ್ಧತೆಯ ಪ್ರಕಾರ ಭಾರತ ಹಾಗೂ ಭಾರತೀಯರ ಏಳಿಗೆಗಾಗಿ ಹ್ಯುಂಡೈ ಇಂಡಿಯಾ ಶ್ರಮ ಮುಂದುವರಿಸಲಿದೆ ಎಂದು ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.