Webdunia - Bharat's app for daily news and videos

Install App

ಇವನೆಂತ ಪತಿ: ಪತ್ನಿಯ ಮೇಲೆ ರೇಪ್ ಎಸಗಲು ಗೆಳೆಯನಿಗೆ ಸಹಕರಿಸಿದ ಭೂಪ

Webdunia
ಶನಿವಾರ, 4 ನವೆಂಬರ್ 2023 (17:05 IST)
ಮೌಲಾನಾ ನೊಮಾನ್ ಸಿದ್ಧಿಕಿ (34)  ಎಂಬಾತ ನನ್ನ ಗಂಡನ ಮುಂದೆಯೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೀಡಿತ ಮಹಿಳೆ ದೂರು ದಾಖಲಿಸಿದ್ದಾಳೆ.  ಇಸ್ಲಾಂ ಮದರಸಾದ ಬೋಧಕನೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬಳು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
 
ಆರೋಪಿ ಸಿದ್ಧಿಕಿ ವಿರುದ್ಧ ಐಪಿಸಿ ಸೆಕ್ಸನ್  376, 506, 324 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನಿಗೆ ಸಹಾಯ ಮಾಡಿದ ಆರೋಪದ ಮೇಲೆ ಪೀಡಿತಳ ಪತಿಯ ಮೇಲೂ ಕೇಸ್ ದಾಖಲಿಸಲಾಗಿದೆ. ಸಿದ್ಧಿಕಿಯನ್ನು ಕುಕ್ಶಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದು, ನಂತರ ನ್ಯಾಯಾಂಗ ಬಂಧನದಲ್ಲಿರಸಲಾಗಿದೆ. ಘಟನೆಯ ನಂತರ ಪೀಡಿತಳ ಪತಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
 
ಪೀಡಿತಳು ನೀಡಿದ ದೂರಿನ ಪ್ರಕಾರ ಖಾರ್ಗೋನೆ ಜಿಲ್ಲೆಯ ಸೆಂದ್ವಾ ನಗರದ ನಿವಾಸಿಯಾಗಿರುವ ಪೀಡಿತಳು ಮತ್ತು ಆಕೆಯ ಪತಿ ಕೆಲವು ತಿಂಗಳುಗಳ ಹಿಂದೆ ಧಾರ್‌ನ ದಹಿ ಎಂಬ ಗ್ರಾಮಕ್ಕೆ ತಮ್ಮ ವಾಸ ಬದಲಿಸಿದ್ದರು ಎಂದು ದಹಿ ಪೊಲೀಸ್ ಸಬ್- ಇನ್ಸಪೆಕ್ಟರ್ ರಮೇಶ್ ಚಂದ್ರ ಸೋಲಂಕಿ ತಿಳಿಸಿದ್ದಾರೆ.
 
ಪತಿಯ ಅನುಪಸ್ಥಿತಿಯಲ್ಲಿ  ಈ ಮೊದಲು ಎರಡು ಬಾರಿ ಮಹಿಳೆಯ ಮೇಲೆ ನೊಮಾನ್ ಸಿದ್ಧಿಕಿ ಅತ್ಯಾಚಾರ ಎಸಗಿದ್ದ ಮತ್ತು ಆ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡು ಆಕೆಗೆ ಬೆದರಿಕೆ ಒಡ್ಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಆಕೆ ಟ್ರಕ್ ಡ್ರೈವರ್ ಆಗಿದ್ದ  ತನ್ನ ಗಂಡನಲ್ಲಿ ದೂರು ನೀಡಿದಳು. ಆಗ ಆಕೆಯನ್ನಾತ ಆರೋಪಿ ಸಿದ್ಧಿಕಿಯ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಸಿದ್ಧಿಕಿ ಆಕೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ. ತನ್ನ ಜತೆ ನಡೆದ ಅನ್ಯಾಯವನ್ನು ಆಕೆ  ತನ್ನ ಕುಟುಂಬದ ಹಿರಿಯ ಸದಸ್ಯರಿಗೆ ಜತೆ ಹೇಳಿಕೊಂಡಳು. ನಂತರ ಕುಟುಂಬದ ಸದಸ್ಯರ ಬೆಂಬಲದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಪ್ಪೇ ಮಾಡಿಲ್ಲ ಅಂದ್ರೆ ಸೈಟು ಮರಳಿಸಿದ್ದು ಯಾಕೆ: ಸಿದ್ದರಾಮಯ್ಯಗೆ ಪ್ರಶ್ನೆ

Karnataka Weather: ರಾಜ್ಯದ ಈ ಜಿಲ್ಲೆಯಲ್ಲಿ ಇಂದೂ ಇರಲಿದೆ ಮಳೆಯ ಅಬ್ಬರ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಮುಂದಿನ ಸುದ್ದಿ
Show comments