Select Your Language

Notifications

webdunia
webdunia
webdunia
webdunia

ಒಂದಲ್ಲ ನೂರು ಬಾರಿ ಭಾರತ್ ಮಾತಾ ಕೀ ಜೈ ಹೇಳ್ತೀವಿ: ರೋಷನ್ ಬೇಗ್

ಒಂದಲ್ಲ ನೂರು ಬಾರಿ ಭಾರತ್ ಮಾತಾ ಕೀ ಜೈ ಹೇಳ್ತೀವಿ: ರೋಷನ್ ಬೇಗ್
ಬೆಂಗಳೂರು , ಶನಿವಾರ, 30 ಏಪ್ರಿಲ್ 2016 (15:27 IST)
ಒಂದಲ್ಲ ನೂರು ಬಾರಿ ಭಾರತ್ ಮಾತಾ ಕೀ ಜೈ ಹೇಳ್ತೀವಿ ಎಂದು ವಾರ್ತಾ ಖಾತೆ ಸಚಿವ ರೋಷನ್ ಬೇಗ್ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
 
ಕಾಂಗ್ರೆಸ್ ಭವನದಲ್ಲಿ ನಡೆದ ಕೆಪಿಸಿಸಿ ಅಲ್ಪಸಂಖ್ಯಾತರ ಸಭೆಯಲ್ಲಿ ಮಾತನಾಡಿದ ಸಚಿವ ರೋಷನ್ ಬೇಗ್ ಓವೈಸಿ ಭಾರತ್ ಮಾತಾ ಕೀ ಜೈ ಹೇಳಬಾರದು ಎಂದು ಹೇಳುವುದು ಸರಿಯಲ್ಲ. ಹಾಗೇ ಹೇಳಬಾರದು ಎಂದು ಹೇಳಲು ಅವರು ಯಾರು? ಎಂದು ಪ್ರಶ್ನಿಸಿದರು.
 
ಪಿಎಫ್‌ಐ ಮಕ್ಕು ಕೆಎಫ್‌ಡಿ ಪಕ್ಷಗಳು ಚುನಾವಣೆಲ್ಲಿ ಸ್ಪರ್ಧಿಸುತ್ತಿವೆ ಅವುಗಳಿಗೆ ಯಾರು ಹಣ ನೀಡುತ್ತಾರೆ.ಚುನಾವಣೆಯಲ್ಲಿ ಸ್ಪರ್ಧಿಸಿಓಟುಗಳನ್ನು ಹಾಳು ಮಾಡುತ್ತಿವೆ. ತಪ್ಪು ಯಾರು ಮಾಡಿದ್ರೂ ಅವರಿಗೆ ಶಿಕ್ಷೆಯಾಗಬೇಕು ಎಂದರು.
 
ಸಂಘ ಪರಿವಾರದವರು ಸಮ್ಮುನೆ ಗಲಾಟೆ ಹುಟ್ಟುಹಾಕುತ್ತಾರೆ. ಅಲ್ಪಸಂಖ್ಯಾತರು ಪ್ರಚೋದನೆಗೆ ಒಳಗಾಗಬಾರದು. ದೇಶದ ಬಗ್ಗೆ ಅಪಾರ ಗೌರವ ಹೊಂದಿರಬೇಕು ಎಂದು ವಾರ್ತಾ ಸಚಿವ ರೋಷನ್ ಬೇಗ್ ಕಿವಿಮಾತು ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ: ಜಿ.ಪರಮೇಶ್ವರ್