ಚಿಕ್ಕತಿರುಪತಿ ದೇವಾಲಯದಲ್ಲಿ ಹುಂಡಿ ಎಣಿಕೆ

Webdunia
ಬುಧವಾರ, 28 ಜುಲೈ 2021 (18:48 IST)
ಕೋಲಾರದ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡುತ್ತಿದ್ದು, ಹುಂಡಿ ಎಣಿಕೆ ವೇಳೆ ಭಕ್ತರು ದೇವರಿಗೆ ಬರೆದಿರುವ ವಿಚಿತ್ರ ಪತ್ರವೊಂದು ಪತ್ತೆಯಾಗಿದೆ‌. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಮಾಡುವಾಗ,‌ ನಿಶ್ಚಿತಾರ್ಥವಾಗಿರುವ ಮದುವೆ ಮುರಿದು ಬೀಳಲಿ ಎಂದು ದೇವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನು ಪತ್ರದಲ್ಲಿ ಮದುವೆಯಾಗಬೇಕಿರುವ ವಧು ಸೇರಿದಂತೆ ಅವರ ಕುಟುಂಬಸ್ಥರ ಐವರ ಹೆಸರುಗಳನ್ನ ಬರೆದು ಇವರಿಗೆ ಶಿಕ್ಷೆ ಕೊಡು ಎಂದು ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ನನಗಾಗಲಿ ನನ್ನ ಕುಟುಂಬಸ್ಥರಿಗಾಗಲೀ ಅವರಿಂದ ತೊಂದರೆ ಆಗದಂತೆ ಕಾಪಾಡು ಎಂದು ಮನವಿ ಮಾಡಿದ್ದು,  ನಿಶ್ಚಿತಾರ್ಥ ಮುರಿದು ಬೀಳಲಿ, ಕೋರ್ಟ್‌, ಕೇಸ್ ಎನ್ನದೆ ಸಂಧಾನಕ್ಕೆ ಬರಲೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.  ಜೊತೆಗೆ ಮುರಿದು ಬಿದ್ದ ನಂತರ ನಿಶ್ಚಿತಾರ್ಥದ ಖರ್ಚು ಬಂದು ತೆಗೆದುಕೊಂಡು ಹೋಗಲಿ, ಮತ್ತೆ ಜೀವನದಲ್ಲಿ ಅವರ ಮುಖವನ್ನು ನಾವು ನೋಡದಂತೆ ಮಾಡು ಎಂದು ಪತ್ರದ ಮುಖೇನ ದೇವರಲ್ಲಿ ಬೇಡಿಕೊಳ್ಳಲಾಗಿದೆ‌‌. ಇನ್ನು ಪ್ರತಿಬಾರಿಯೂ ಹುಂಡಿ ಎಣಿಕೆ ವೇಳೆ ಈ ರೀತಿಯ ವಿಚಿತ್ರ ಪತ್ರಗಳು ಪತ್ತೆಯಾಗುತ್ತಿದ್ದು, ಅಮಾನ್ಯಗೊಂಡ ಹಳೆಯ ನೋಟುಗಳು, ವಿದೇಶಿ ಕರೆನ್ಸಿ ಸೇರಿದಂತೆ ಇತರೆ ವಸ್ತುಗಳನ್ನ ದೇವರಿಗೆ ಹುಂಡಿಯಲ್ಲಿ ಹಾಕುವ ಮೂಲಕ ಸಮರ್ಪಣೆ ಮಾಡುತ್ತಾರೆ‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ತಿಕ್ಕಾಟಕ್ಕೆ ಸ್ಪೋಟಕ ತಿರುವು

Karnataka Weather: ಸೈಕ್ಲೋನ್ ಇಫೆಕ್ಟ್, ಕರ್ನಾಟಕದಲ್ಲಿ ಇನ್ನೆಷ್ಟು ದಿನ ಮಳೆಯಿರಲಿದೆ

ಕಾರಿಗೆ ಅಡ್ಡ ಬಂದ ನಾಯಿ: ಕಾರು ಪಲ್ಟಿಯಾಗಿ ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು

ನನ್ನೊಂದಿಗೆ ಆಟವಾಡಲು ಬರಬೇಡಿ: ಕೇಂದ್ರದ ವಿರುದ್ಧ ಬ್ಯಾನರ್ಜಿ ಕಿಡಿ

ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲ್ಲ: ಮಲ್ಲಿಕಾರ್ಜುನ ಖರ್ಗೆ ಹಿಂಗದಿದ್ಯಾಕೆ

ಮುಂದಿನ ಸುದ್ದಿ
Show comments