Webdunia - Bharat's app for daily news and videos

Install App

ನೇಹಾ ಮರಣೋತ್ತರ ಪರೀಕ್ಷೆಯಲ್ಲಿದೆ ಬೆಚ್ಚಿಬೀಳಿಸುವ ಅಂಶ

Krishnaveni K
ಸೋಮವಾರ, 22 ಏಪ್ರಿಲ್ 2024 (12:33 IST)
ಹುಬ್ಬಳ್ಳಿ: ತನ್ನ ಪ್ರೀತಿಗೆ ಒಪ್ಪದ ಕಾರಣಕ್ಕೆ ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ನೇಹಾಳನ್ನು ಹತ್ಯೆ ಮಾಡಿದ್ದ ಫಯಾಜ್ ಆಕೆಯನ್ನು ಎಷ್ಟು ಹಿಂಸಿಸಿದ್ದಾನೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.

ನೇಹಾ ಮರಣೋತ್ತರ ಪರೀಕ್ಷೆ ವರದಿ ಇದೀಗ ಬಯಲಾಗಿದ್ದು ಫಯಾಜ್ ಮಾಡಿದ ಕೃತ್ಯದ  ವಿವರ ಗೊತ್ತಾಗಿದೆ. ಫಯಾಜ್ ಆಕೆಗೆ 9 ಬಾರಿ ತಿವಿದಿದ್ದ ಎನ್ನಲಾಗಿತ್ತು. ಆತನೂ ಜೈಲಾಧಿಕಾರಿಗಳ ಮುಂದೆ ಇದನ್ನೇ ಹೇಳಿದ್ದ. ನನ್ನ ಜೊತೆ ಮಾತನಾಡಲ್ಲ ಎಂದಿದ್ದಕ್ಕೆ ಚಾಕುವಿನಿಂದ 9 ಬಾರಿ ತಿವಿದಿದ್ದೆ ಎಂದಿದ್ದ.

ಆದರೆ ಆತ 9 ಬಾರಿಯಲ್ಲ, ಒಟ್ಟು 14 ಬಾರಿ ತಿವಿದಿದ್ದ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ನೇಹಾಳ ಹೃದಯಕ್ಕೆ ಚಾಕುವಿನಿಂದ ಇರಿದಿದ್ದ ಪಾಪಿ ಕುತ್ತಿಗೆಗೆ ಹಲವು ಬಾರಿ ಇರಿದಿದ್ದ. ಪರಿಣಾಮ ಕುತ್ತಿಗೆಯ ನರ ಕಟ್ ಆಗಿ ವಿಪರೀತ ರಕ್ತಸ್ರಾವದಿಂದ ನೇಹಾ ಮೃತಪಟ್ಟಿದ್ದಾಳೆ. ಕುತ್ತಿಗೆ ಮಾತ್ರವಲ್ಲದೆ, ಬೆನ್ನಿಗೂ ಆತ ಚಾಕುವಿನಿಂದ ಇರಿದಿದ್ದ ಎನ್ನುವುದಕ್ಕೆ ಗಾಯಗಳು ಸಾಕ್ಷಿಯಾಗಿವೆ.

ಇಷ್ಟು ಭೀಕರವಾಗಿ ಹತ್ಯೆ ಮಾಡಿದ ಬಳಿಕ ಫಯಾಜ್ ಕಿಮ್ಸ್ ಆಸ್ಪತ್ರೆಯ ಹಿಂಭಾಗ ಅಡಗಿ ಕುಳಿತಿದ್ದ. ಸ್ಥಳೀಯರ ನೆರವಿನಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಅತ್ತ ವಿಪರೀತ ಗಾಯಗೊಂಡಿದ್ದ ನೇಹಾಳನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರು ದಸರಾದಲ್ಲಿ ಕಂಬಳ, ಚರ್ಚೆ ನಡುವೆ ಮಹತ್ವದ ವಿಚಾರ ಹಂಚಿಕೊಂಡ ಡಾ.ಯತೀಂದ್ರ ಸಿದ್ದರಾಮಯ್ಯ

ಇನ್ನೇನು ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನಕ್ಕೆ ಬಂತು ಬಾಂಬ್‌ ಬೆದರಿಕೆ

ವಿಮಾನದಲ್ಲಿ ಟೂರಿಸ್ಟ್‌ ಬಸ್‌ನಲ್ಲಿ ಊಟ ಸವಿದ ಹಾಗೇ ನಡೆದುಕೊಂಡ ಫ್ಯಾಮಿಲಿ, Video Viral

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಯಿಯಿಂದ ಚಿನ್ನ ಉಗುಳಿದ ವ್ಯಕ್ತಿ, ನಿಜಕ್ಕೂ ನಡೆದಿದ್ದು ಏನು ಗೊತ್ತಾ

ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿರುವ ತರಕಾರಿಗಳ ಬಗ್ಗೆ ಆಘಾತಕಾರಿ ಮಾಹಿತಿ ಹಂಚಿಕೊಂಡ ಯುಟಿ ಖಾದರ್

ಮುಂದಿನ ಸುದ್ದಿ
Show comments