ಮತದಾನ ಮಾಡಿದವರಿಗೆ ಎಣ್ಣೆಗೆ ಡಿಸ್ಕೌಂಟ್! ಹುಬ್ಬಳ್ಳಿಯಲ್ಲಿ ಭರ್ಜರಿ ಆಫರ್

Krishnaveni K
ಸೋಮವಾರ, 6 ಮೇ 2024 (12:40 IST)
ಹುಬ್ಬಳ್ಳಿ: ನಾಳೆ ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು, ಹುಬ್ಬಳ್ಳಿಯಲ್ಲೂ ನಾಳೆ ಮತದಾನ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಹುಬ್ಬಳ್ಳಿಯ ಬಾರ್ ಮಾಲಿಕರೊಬ್ಬರು ಎಣ್ಣೆ ಪ್ರಿಯರಿಗೆ ಭರ್ಜರಿ ಆಫರ್ ನೀಡಿದ್ದಾರೆ.

ಮತದಾನ ಮಾಡಿದವರಿಗೆ ಊಟ, ತಿಂಡಿ ಫ್ರೀ ಕೊಡುವ ಘಟನೆಗಳನ್ನು ನೋಡಿದ್ದೇವೆ. ಇದೀಗ ಹುಬ್ಬಳ್ಳಿಯ ಬಾರ್ ಮಾಲಿಕರೊಬ್ಬರು ಮತದಾನ ಮಾಡಿ ಬಂದು ಗುರುತಿನ ಚೀಟಿ ತೋರಿಸುವ ಮತದಾರರಿಗೆ ರಿಯಾಯಿತಿ ದರದಲ್ಲಿ ಮದ್ಯ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಬಾರ್ ಮಾಲಿಕರು ದೊಡ್ಡ ಆಫರ್ ನೀಡಿದ್ದಾರೆ. ಹುಬ್ಬಳ‍್ಳಿಯ ಕುಸುಗಲ್ ರಸ್ತೆಯಲ್ಲಿರುವ ಕರ್ನಾಟಕ ವೈನ್ಸ್ ಅಂಗಡಿ ಮಾಲಿಕರು ಮತದಾನ ಮಾಡಿದ ಗುರುತಿನ ಚೀಟಿ ತೋರಿಸಿದವರಿಗೆ ಶೇ.3 ರಷ್ಟು ರಿಯಾಯಿತಿ ದರದಲ್ಲಿ ಮದ್ಯ ನೀಡುವುದಾಗಿ ಘೋಷಿಸಿದ್ದಾರೆ.

ಈ ಮೊದಲು ಬೆಂಗಳೂರಿನಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆದಿದ್ದಾಗ ಹೋಟೆಲ್ ನಲ್ಲಿ ಉಚಿತ ಊಟ, ಜ್ಯೂಸ್ ನೀಡಲಾಗಿತ್ತು. ಆದರೆ ಹುಬ್ಬಳ್ಳಿಯ ಈ ಬಾರ್ ಮಾಲಿಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಿಯಾಯಿತಿ ದರದಲ್ಲಿ ಮದ್ಯ ನೀಡಲು ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂ ಯುವತಿಯರನ್ನು ಗರ್ಭಿಣಿಯರಾಗಿ ಮಾಡುವುದೇ ನನ್ನ ಕೆಲಸ: ಶಾದ್ ಸಿದ್ದಿಕಿ

ನನ್ನ ಒಬ್ಬನನ್ನು ಸಮೀಕ್ಷೆ ಮಾಡಲು ಇಷ್ಟೊಂದು ಜನ ಬೇಕಾ: ವಿ ಸೋಮಣ್ಣ ಕ್ಲಾಸ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕೆಮ್ಮಿನ ಸಿರಪ್ ಗೆ ಮಕ್ಕಳ ಸಾವು ಕೇಸ್: ಪಟ್ಟಿಯಲ್ಲಿಲ್ಲದಿದ್ದರೂ ರೋಗಿಗಳಿಗೆ ನೀಡುತ್ತಿದ್ದ ವೈದ್ಯ ಅರೆಸ್ಟ್

Shakti Cyclone: ದೇಶದ ಈ ಭಾಗಗಳಿಗೆ ನಾಳೆ ಅಪ್ಪಳಿಸಲಿದೆ ಶಕ್ತಿ ಸೈಕ್ಲೋನ್

ಮುಂದಿನ ಸುದ್ದಿ
Show comments