Webdunia - Bharat's app for daily news and videos

Install App

ರೇಷನ್ ಕಾರ್ಡ್ ಗೆ ಹೊಸದಾಗಿ ಹೆಸರು ಸೇರಿಸುವುದು ಹೇಗೆ

Krishnaveni K
ಮಂಗಳವಾರ, 17 ಸೆಪ್ಟಂಬರ್ 2024 (10:30 IST)
ಬೆಂಗಳೂರು: ಹೊಸದಾಗಿ ಮನೆಯ ಸದಸ್ಯರಾಗಿ ಸೇರ್ಪಡೆಯಾದವರನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಲೇಬೇಕಾಗುತ್ತದೆ. ಆದರೆ ಹೊಸ ಹೆಸರು ಸೇರ್ಪಡೆ ಹೇಗೆ ಎಂದು ತಿಳಿದುಕೊಳ್ಳಲು ಇಲ್ಲಿ ನೋಡಿ.

ಮನೆಗೆ ಹೊಸದಾಗಿ ಮದುವೆಯಾಗಿ ಬಂದ ಮಹಿಳೆ ಅಥವಾ ಮಕ್ಕಳ ಹೆಸರು ಸೇರ್ಪಡೆಯಾಗಬೇಕಾದರೆ ಮುಖ್ಯವಾಗಿ ಅವರ ಆಧಾರ್ ಕಾರ್ಡ್ ಬೇಕಾಗುತ್ತದೆ. ಒಂದು ವೇಳೆ ಮದುವೆಯಾಗಿ ಬಂದ ಮಹಿಳೆಯ ಹೆಸರು ಸೇರ್ಪಡೆಯಾಗಬೇಕಾದರೆ ಆಕೆಯ ತವರು ಮನೆಯ ಪಡಿತರ ಚೀಟಿಯಲ್ಲಿರುವ ಹೆಸರು ಅಳಿಸಿ ಮತ್ತೆ ಇಲ್ಲಿ ಹೊಸದಾಗಿ ಸೇರ್ಪಡೆ ಮಾಡಬೇಕಾಗುತ್ತದೆ. ಮಕ್ಕಳ ಹೆಸರು ಸೇರಿಸಬೇಕಾದರೆ ಮಗುವಿನ ಜನನ ಪ್ರಮಾಣ ಪತ್ರದ ಜೊತೆಗೆ ಪೋಷಕರ ಆಧಾರ್ ಕಾರ್ಡ್ ಕೂಡಾ ಬೇಕಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೊಳಿಸುವುದನ್ನು ಆನ್ ಲೈನ್ ಮುಖಾಂತರವೂ ಮಾಡಬಹುದು.

ಇದಕ್ಕಾಗಿ https://ahara.kar.nic.in/home ಎಂಬ ವೆಬ್ ಸೈಟ್ ಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ. ಮೊದಲ ಪುಟದಲ್ಲಿ ಇ ಸೇವೆ ಕ್ಲಿಕ್ ಮಾಡಿ, ಹೊಸ ಪಡಿತರ ಸೇರ್ಪಡೆ ಆಯ್ಕೆಯನ್ನು ಒತ್ತಿ. ಈಗ ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ. ಬಳಿಕ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಿ. ನೀವು ನೀಡಿರುವ ದಾಖಲೆಗಳು ಸರಿಯಾಗಿದ್ದರೆ ನಿಮ್ಮ ಮನೆಗೇ ಪಡಿತರ ಚೀಟಿ ಬರುತ್ತದೆ.

ಒಂದು ವೇಳೆ ನಿಮಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ತಿಳಿಯುತ್ತಿಲ್ಲ ಎಂದಾದರೆ ಹತ್ತಿದ ಬೆಂಗಳೂರು ಒನ್ ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದರೆ ಅದರ ಸ್ಟೇಟಸ್ ತಿಳಿಯಲೂ ನಿಮಗೆ ಅವಕಾಶವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸರಿಬ್ಬರ ನಕಲಿ ಎನ್‌ಕೌಂಟರ್‌: ಪಂಜಾಬ್‌ನ ನಿವೃತ್ತ ಪೊಲೀಸ್ ಅಧಿಕಾರಿಗೆ 10ವರ್ಷ ಕಠಿಣ ಜೈಲು ವಾಸ

ಕರಾವಳಿ ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

130 ಗಂಟೆ ನಿರಂತರ ಭರತನಾಟ್ಯ, 3ಗಂಟೆಗೊಮ್ಮೆ 15 ನಿಮಿಷ ಬ್ರೇಕ್‌, ವಿಶ್ವದಾಖಲೆಯತ್ತ ಮಂಗಳೂರಿನ ಯುವತಿ

ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಡಿಸಿಎಂ ಡಿಕೆ ಶಿವಕುಮಾರ್‌

ಯಾವಾ ಸಾಧನೆಗೆ ಸಾಧನಾ ಸಮಾವೇಶ ಎಂದು ಕಾಂಗ್ರೆಸ್ಸಿಗರೇ ಉತ್ತರಿಸಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments