ಅಚ್ಛೇ ದಿನ್ ಬರಲು ಇನ್ನೆಷ್ಟು ದಿನ ಬೇಕು: ಯುಟಿ ಖಾದರ್ ಪ್ರಶ್ನೆ

Webdunia
ಗುರುವಾರ, 2 ಸೆಪ್ಟಂಬರ್ 2021 (18:26 IST)
ದೇಶಕ್ಕೆ ಅಚ್ಚೇದಿನ್  ಬರಲು ಇನ್ನೂ ಎಷ್ಟು ವರ್ಷ ಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾತ
ನಾಡಿದ ಅವರು, ಅಚ್ಚೇದಿನ್ ಗಾಗಿ ಸರ್ಕಾರ ಇನ್ನೂ ಎಷ್ಟು ಜನ್ರಿಂದ ಸುಲಿಗೆ ಮಾಡುತ್ತೆ? ಜನ್ರಿಗೆ ಅಚ್ಚೇದಿನ್ ಯಾವಾಗ ಬರುತ್ತೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ. ಈ ಸರ್ಕಾರ ಜನಸಾಮಾನ್ಯರ ಜೇಬು ಕಳ್ಳ ಮಾಡುವ ಸರ್ಕಾರ. ರಾತ್ರಿ ಬೆಳಗಾಗುವುದ್ರಲ್ಲಿ ಬೆಲೆ ಏರಿಕೆ ಮಾಡೋ ಮೂಲಕ ಜನ್ರ ಜೇನಿಗೆ ಕತ್ತರಿ ಹಾಕ್ತಿದೆ ಎಂದು ಕಿಡಿಕಾರಿದರು. ಇನ್ನು ಜನಸಾಮಾನ್ಯರ ಬಗ್ಗೆ ಸಂಸದರು, ಸಚಿವರಿಗೆ ಯಾವುದೇ ಒಂದು ಕಾಳಜಿ ಇಲ್ಲ. ಪೆಟ್ರೋಲಿಯಂ ಬೆಲೆ ಜಾಸ್ತಿಯಾದ್ರೆ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಒಂದು ವಿಚಾರ ಸರ್ಕಾರ ಮನದಟ್ಟು ಮಾಡಿಕೊಳ್ಳಲಿ. ದೇಶದ ಏಳು ಎಂಟು ಮಂದಿ ಮಾತ್ರ ವಿಶ್ವದಲ್ಲೇ ಶ್ರೀಮಂತರ ಪಟ್ಟಿಯ ಒಂದನೇ ಸ್ಥಾನಕ್ಕೆ ಬರ್ತಾರೆ. ಇವ್ರು ಏಳು ವರ್ಷಗಳ ಅವಧಿಯಲ್ಲಿ ಶ್ರೀಮಂತರಾಗಲು ಸರ್ಕಾರ  ಸಹಕಾರ ಮಾಡ್ತಾ ಇದೆ. ಆದ್ರೆ ಇಲ್ಲಿನ ಜನ್ರು ಬಡವರಾಗಿಯೇ ಬಿಡ್ತಾ ಇದ್ದಾರೆ. ಆದ್ರೆ ಇವ್ರು ಏಳು ವರ್ಷಗಳ ಅವಧಿಯಲ್ಲಿ ಶ್ರೀಮಂತರಾಗಲು ಕಾರಣ ಏನು ಎಂದು ಪ್ರಶ್ನಿಸಿದ ಅವರು, ಸರ್ಕಾರ ಇವರಿಗೆ ಬೆನ್ನೆಲುಬಾಗಿ ಸಹಾಯ ಮಾಡ್ತಾ ಇದೆ. ಇನ್ನು ಸರ್ಕಾರ ಯಾವುದೇ ಹೊರೆಯನ್ನು ಜನ್ರ ಮೇಲೆ ಹಾಕಬಾರದು. ಈ ಹಿಂದೆ ನಮ್ಮ ಸರ್ಕಾರ ಯಾವುದೇ ಬೆಲೆ ಏರಿಕೆಯ ಹೊರೆಯನ್ನು ಜನ್ರ ಮೇಲೆ ಹಾಕಿಲ್ಲ. ಈ ಸರ್ಕಾರ ಜನ್ರಿಗೆ ಮಾರಕವಾಗುವ ಸರ್ಕಾರವಾಗಿದೆ. ಕೇಂದ್ರದ ವಿರುದ್ದ ಮುಂದಿನ ದಿನಗಳಲ್ಲಿ ಜನ್ರು ದಂಗೆಗೆ ಮುಂದಾಗಬಹುದು ಅಂದರು. ಇನ್ನು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಯಾವುದೇ ಯೋಜನೆ ಯೋಚನೆ ಇಲ್ಲ. ಆನ್ ಲೈನ್, ಆಫ್ ಲೈನ್ ಹತ್ತು ಹಲವು ಗೊಂದಲ ಇದೆ
ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಉಡುಪಿ ರೋಡ್ ಶೋ ಆರಂಭ live video

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಹೈಕಮಾಂಡ್ ಮೀಟಿಂಗ್ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕರ್ನಾಟಕ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ತಮ್ಮ ನಿರ್ಧಾರ ಪ್ರಕಟಿಸಿದ ಡಿಕೆ ಶಿವಕುಮಾರ್

ಉಡುಪಿ ಕೃಷ್ಣನ ಊರಿನಲ್ಲಿ ಪ್ರಧಾನಿ ಮೋದಿ ಇಂದು ಏನೇನು ಮಾಡಲಿದ್ದಾರೆ

ಮುಂದಿನ ಸುದ್ದಿ
Show comments