ಬೆಂಗಳೂರು : ಕೊರೊನಾ ಮೂರನೇ ಅಲೆಯ ಹಿನ್ನೆಲೆ ಈಗಾಗಲೇ ನಗರದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು.
ಇದೀಗ ಜನವರಿ 29 ವರೆಗೂ ಶಾಲೆಗಳನ್ನು ತೆರೆಯದೆ ಇರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಿಟ್ಟು ಎಲ್ಲಾ ಕಡೆ ಯಥಾಸ್ಥಿತಿ ಶಾಲೆ ಮುಂದುವರಿಕೆಗೆ ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಜನವರಿ 29 ವರೆಗೂ ಶಾಲೆಗಳು ಕ್ಲೋಸ್ ಆಗಿರಲಿದ್ದು, ಬೆಂಗಳೂರು ಬಿಟ್ಟು, ಬೇರೆ ಎಲ್ಲ ಕಡೆ ಅಧಿಕಾರಿಗಳ ಅಭಿಪ್ರಾಯ ಪಡೆದು, ಪಾಸಿಟಿವ್ ರೇಟ್ ನೋಡಿಕೊಂಡು ಆರಂಭ ಅಗುತ್ತವೆ.