Select Your Language

Notifications

webdunia
webdunia
webdunia
webdunia

ಹೌ ಕ್ಯಾನ್ ಯು ಸೇ ಗ್ಯಾಂಗ್ ರೇಪ್: ವಿವಾದಾತ್ಮಕ ಹೇಳಿಕೆಗೆ ಜಾರ್ಜ್ ಸ್ಪಷ್ಟನೆ

ಹೌ ಕ್ಯಾನ್ ಯು ಸೇ ಗ್ಯಾಂಗ್ ರೇಪ್: ವಿವಾದಾತ್ಮಕ ಹೇಳಿಕೆಗೆ ಜಾರ್ಜ್ ಸ್ಪಷ್ಟನೆ
ಬೆಂಗಳೂರು , ಶುಕ್ರವಾರ, 9 ಅಕ್ಟೋಬರ್ 2015 (13:40 IST)
ಬೆಂಗಳೂರಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಯುವತಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಆ ಪ್ರಕರಣವನ್ನು ನೀವು ಗ್ಯಾಂಗ್ ರೇಪ್ ಎನ್ನುತ್ತೀರಾ ಎಂದು ಉದ್ಗಾರ ತೆಗೆದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸ್ಪಷ್ಟನೆ ನೀಡಿದ್ದಾರೆ. 
 
ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿಲ್ಲ. ಆದರೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಸಾಮೂಹಿಕ ಅತ್ಯಾಚಾರ ಎಂದು ಪ್ರಕಟಿಸಿ ಸುದ್ದಿ ಬಿತ್ತರಿಸುತ್ತಿದ್ದಾರೆ. ಆದ ಕಾರಣ ಸಾಮೂಹಿಕ ಎಂದು ಬಿತ್ತರವಾದಲ್ಲಿ ರಾಜ್ಯದ ಜನತೆಗೆ ಇನ್ನೆಷ್ಟು ಜನ ಅತ್ಯಾಚಾರ ಎಸಗಿದ್ದಾರೋ ಎಂಬ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ಸಾಮೂಹಿಕ ಅತ್ಯಾಚಾರ ಎಂದು ವೈಭವೀಕರಿಸಿ ಬಿತ್ತರಿಸುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು. 
 
ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಸಚಿವರು, ಬೆಂಗಳೂರಿನಲ್ಲಿ ಇಬ್ಬರಿಂದ ನಡೆದಿರುವ ರೇಪ್ ಪ್ರಕಱಣ ಗ್ಯಾಂಗ್ ರೇಪಾ, ಇದನ್ನು ಗ್ಯಾಂಗ್ ರೇಪ್ ಎಂದು ಹೇಗೆ ಹೇಳುತ್ತೀರಿ, ಇಬ್ಬರು ಅತ್ಯಾಚಾರ ಮಾಡಿರುವುದನ್ನು ಗ್ಯಾಂಗ್ ರೇಪ್ ಎಂದು ಹೇಳಲು ಹೇಗೆ ಸಾಧ್ಯ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೆ ಈ ಪ್ರಕರಣ ಸಂಬಂಧ ಈಗಾಗಲೇ ರಾಷ್ಟ್ರೀಯ ಮಹಿಳಾ ಆೋಗವೂ ಕೂಡ ಜಾರ್ಜ್ ಅರಿಗೆ ನೋಟಿಸ್ ಜಾರಿಗೊಳಿಸಿದ್ದು ಸ್ಪಷ್ಟನೆ ನೀಡುವಂತೆ ಸೂಚಿಸಿದೆ. 
 
ಇನ್ನು ಭಾರತದ ಕಾನೂನಿನ ಪ್ರಕಾರ ಐಪಿಸಿ ಸೆಕ್ಷನ್ 376(ಡಿ) ವಿಧಿಯಲ್ಲಿ ಕೆಲ ಸಾರಾಂಶದ ಪ್ರಕಾರ ಸಮಾನ ಉದ್ದೇಶದಿಂದ ಮಹಿಳೆಯೋರ್ವಳ ಮೇಲೆ ಓರ್ವ ವ್ಯಕ್ತಿ ಅಥವಾ ಅದಕ್ಕೂ ಮೀರಿದ ಹೆಚ್ಚು ಜನರಿರುವ ಗುಂಪೊಂದು ನಡೆಸುವ ದೌರ್ಜನ್ಯ, ಅಥವಾ ಮಾನಸಿಕ, ದೈಹಿಕವಾಗಿ ಲೈಂಗಿಕ ಕಿರುಕುಳ ಗ್ಯಾಂಗ್ ರೇಪ್ ಆಗುತ್ತದೆ ಎಂದು ವಿವರಿಸಲಾಗಿದೆ. ಇದನ್ನು 2013ರಲ್ಲಿ ತಿದ್ದುಪಡಿ ತಂದು ಮಾರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಕರಣವನ್ನು ಗ್ಯಾಂಗ್ ರೇಪ್ ಅಥವಾ ಸಾಮೂಹಿಕ ಅತ್ಯಾಚಾರ ಪ್ರಕರಣ ಎಂದು ಬಿತ್ತರಿಸುವಲ್ಲಿ ತಪ್ಪಿಲ್ಲ ಎಂಬುದು ತಜ್ಞರ ಅಭಿಪ್ರಾಯ.   
 
ಮಾಧ್ಯಗಳೊಂದಿಗೆ ಸಚಿವರು ಹೀಗೆ ಪ್ರತಿಕ್ರಿಯಿಸಿದ್ದರು: ಹೌ ಕ್ಯಾನ್ ಯು ಸೇ ಗ್ಯಾಂಗ್ ರೇವ್, ಹೌ ಕ್ಯಾನ್ ಇಟ್ ಬಿ ಎ ಗ್ಯಾಂಗ್ ರೇಪ್  ಎಂದು ಪ್ರಶ್ನಿಸಿದ್ದರು. 

Share this Story:

Follow Webdunia kannada