Select Your Language

Notifications

webdunia
webdunia
webdunia
webdunia

ನೈಸ್ ಯೋಜನೆಗಳ ಅಕ್ರಮ ತನಿಖೆಗೆ ಸದನ ಸಮಿತಿ: ಮಹದೇವಪ್ಪ

ನೈಸ್ ಯೋಜನೆಗಳ ಅಕ್ರಮ ತನಿಖೆಗೆ ಸದನ ಸಮಿತಿ: ಮಹದೇವಪ್ಪ
ಬೆಂಗಳೂರು , ಗುರುವಾರ, 24 ಜುಲೈ 2014 (16:52 IST)
ನೈಸ್ ಯೋಜನೆ ಅಕ್ರಮಗಳ ತನಿಖೆಗೆ ಸದನ ಸಮಿತಿ ರಚಿಸುವುದಾಗಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ . ವಿಧಾನಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಎಚ್‌ಡಿಕೆ ಸಮಿತಿ ರಚಿಸುವಂತೆ ಒತ್ತಾಯಿಸಿದರು.

ಸರ್ವಪಕ್ಷಗಳ ಸದಸ್ಯರು ಕೂಡ ಸಮಿತಿ ರಚಿಸುವಂತೆ ಒತ್ತಾಯಿಸಿದ್ದವು. ಈ ಹಿನ್ನಲೆಯಲ್ಲಿ ನೈಸ್ ಯೋಜನೆಗಳ ಅಕ್ರಮಗಳ ತನಿಖೆಗೆ ಸದನಸಮಿತಿ ರಚಿಸುವುದಾಗಿ ಮಹದೇವಪ್ಪ ಹೇಳಿದರು. ನೈಸ್ ಯೋಜನೆಯ ಒಪ್ಪಂದಗಳ ಉಲ್ಲಂಘನೆಯಾಗಿದೆ.

ನಿಯಮ ಉಲ್ಲಂಘನೆ ಕುರಿತಂತೆ ತನಿಖೆ ನಡೆಯಲಿದೆ ಎಂದು ಅವರು ಹೇಳಿದರು. ನೈಸ್ ಯೋಜನೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದರಿಂದ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒತ್ತಾಯಿಸಿದ್ದರು.

Share this Story:

Follow Webdunia kannada