ಯೋಗ ದಿನಾಚರಣೆಗೆ ತಟ್ಟಿದ ಪ್ರತಿಭಟನೆಯ ಬಿಸಿ

Webdunia
ಮಂಗಳವಾರ, 21 ಜೂನ್ 2022 (19:53 IST)
ಇಂದು ವಿಶ್ವದಾದ್ಯಂತ ನಡೆದ ಯೋಗ ದಿನಾಚರಣೆಯಲ್ಲಿ ಹಲವು ದೇಶದ ಸದಸ್ಯರು ಯೋಗ ಭಂಗಿಗಳನ್ನು ಪ್ರದರ್ಶಿಸಿದ್ದಾರೆ. ಅದರೆ, ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಯೋಗ ದಿನಾಚರಣೆಗೆ ಪ್ರತಿಭಟನೆಯ ಬಿಸಿ ತಟ್ಟಿದೆ. 
 
 
ಮಾಲ್ಡೀವ್ಸ್ನ ರಾಜಧಾನಿ ಮಾಲೆಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನುಗಿದ ಗುಂಪೊಂದು ಯೋಗ ಇಸ್ಲಾಂಗೆ ವಿರುದ್ದವಾದದ್ದು ಎಂದು ಆರೋಪಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದೆ. 
 
ಕಾರ್ಯಕ್ರಮಕ್ಕು ಮುನ್ನ ಕ್ರೀಡಾಂಗಣದ ಹೊರಗೆ ಬಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದ ಸದಸ್ಯರು ಇದು ಒಂದು ಧರ್ಮ ದ್ರೋಹಿ ಕ್ರಿಯೆಯಾಗಿದೆ ಎಂದು ಆರೋಪಿಸಿದ್ದಾರೆ. 
 
ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತೀಯ ರಾಯಭಾರಿ ಕಚೇರಿಯು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿತ್ತು. ಸ್ಥಳಕ್ಕೆ ಆಗಮಿಸಿದ ಪ್ರತಿಭಟನಕಾರರು ಯೋಗ ಮಾಡುವುದನ್ನು ಕೂಡಲೇ ಕೈ ಬಿಟ್ಟು ತೆರಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ನೆರೆದಿದ್ದವರು ಆರೋಪಿಸಿದ್ದಾರೆ. 
 
ಕಾರ್ಯಕ್ರಮದಲ್ಲಿ ಮಾಲ್ಡೀವ್ಸ್ ಸರ್ಕಾರ ಸಚಿವರು ಹಾಗು ಅಧಿಕಾರಿಗಳು ಭಾಗಿಯಾಗಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರತಿಭಟನಕಾರರು ಕಾರ್ಯಕ್ರಮಕ್ಕಾಗಿ ಹಾಕಿದ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡುತ್ತಿರುವುದು ಕಂಡು ಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ಇರಾನ್ ಯುದ್ಧದ ನಡುವೆ ಬ್ಯಾಕ್ ಟು ಬ್ಯಾಕ್ ಮೀಟಿಂಗ್ ನಡೆಸಿದ ಪ್ರಧಾನಿ ಮೋದಿ

Video: ಇರಾನ್ ಗೆ ಸಹಾಯ ಮಾಡಲು ಮನೆಯಲ್ಲಿದ್ದ ಚಿನ್ನ, ಹಣ ಕೊಟ್ಟ ಕಾಶ್ಮೀರಿ ಮುಸ್ಲಿಮರು

ಸಚಿವ ಶಿವರಾಜ್ ತಂಗಡಗಿ ದಿಡೀರ್ ಆಸ್ಪತ್ರೆಗೆ ದಾಖಲು

ಹೊರ್ಮುಜ್ ಜಲಸಂಧಿ ದಾಟಬೇಕಾದರೆ ಇರಾನ್ ಷರತ್ತಿಗೆ ಇತರೆ ರಾಷ್ಟ್ರಗಳು ಶಾಕ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಮಗೆ ಈ ಇಷ್ಟದ ಐಟಂ ಸಿಗಲ್ಲ: ಇದಕ್ಕೆಲ್ಲಾ ಗ್ಯಾಸ್ ಸಿಲಿಂಡರ್ ಕಾರಣ

ಮುಂದಿನ ಸುದ್ದಿ
Show comments