ಸಂದರ್ಶನಕ್ಕೆ ಬಂದವರು ಮಸಣ ಸೇರಿದರು

Webdunia
ಶನಿವಾರ, 30 ಏಪ್ರಿಲ್ 2016 (09:01 IST)
ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್ ಬಳಿ ಭೀಕರ ಸರಣಿ ಅಪಘಾತ ನಡೆದಿದ್ದು  ಒಟ್ಟು 8 ಜನರು ದುರ್ಮರಣವನ್ನಪ್ಪಿದ್ದಾರೆ. 
 
ರಾಷ್ಟ್ರೀಯ ಹೆದ್ದಾರಿ 150 (ಎ) ನಲ್ಲಿ ಬೆಳಗ್ಗೆ ಸುಮಾರು 4.30 ರ ವೇಳೆಗೆ ಖಾಸಗಿ ಬಸ್‌‌‌, ಸರ್ಕಾರಿ ಬಸ್‌‌ ಮತ್ತು ಕ್ರೂಸರ್‌ ನಡುವೆ ಅಪಘಾತ ಸಂಭವಿಸಿದೆ. ಕೆಎಸ್‌‌ಆರ್‌ಟಿಸಿ ಬಸ್‌‌- ಕ್ರೂಸರ್‌ ಮುಖಾಮುಖಿ‌ ಡಿಕ್ಕಿಯಾಗಿದ್ದು ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್‌ ಸಹ ಕ್ರೂಸರ್‌ಗೆ ಡಿಕ್ಕಿ ಹೊಡೆದಿದೆ. ಕ್ರೂಸರ್ ಬೆಂಗಳೂರಿನಿಂದ ಬಳ್ಳಾರಿಗೆ ವಾಪಸ್ಸಾಗುತ್ತಿದ್ದರೆ, ಸರ್ಕಾರಿ ಬಸ್ ದೇವದುರ್ಗದಿಂದ ಬೆಂಗಳೂರಿನ ಕಡೆ ಸಾಗುತ್ತಿತ್ತು. 
 
ಘಟನೆಯಲ್ಲಿ ಕ್ರೂಸರ್ ಚಾಲಕ ಸೇರಿ 7 ವಿದ್ಯಾರ್ಥಿನಿಯರು ಸೇರಿ 8 ಜನರು ಸಾವನ್ನಪ್ಪಿದ್ದಾರೆ. ಮೃತರನ್ನು ಕ್ರೂಸರ್ ಚಾಲಕ ಚಂದ್ರೇಗೌಡ(35), ವಿದ್ಯಾರ್ಥಿನಿಯರಾದ ಶಾಂತಿ (20) , ಸುಧಾ (20), ಜಯಶ್ರೀ (21), ಶೃತಿ (21), ಹರ್ಷಿತಾ(21) ಸರಿತಾ(21), ಭಾರತಿ(21) ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ನಿವಾಸಿಗಳಾಗಿದ್ದಾರೆ. 
 
ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿ ಸಂದರ್ಶನ ಮುಗಿಸಿ ಕ್ರೂಸರ್‌‌ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ವಾಪಸ್ಸಾಗುತ್ತಿದ್ದರು. ಘಟನೆಯಲ್ಲಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಈಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ದಾರುಣ ಸಾವು

ಖಮೇನಿ ಹತ್ಯೆಯನ್ನು ಖಂಡಿಸಿ, ಟ್ರಂಪ್ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

ಖಮೇನಿ ಹತ್ಯೆ ಖಂಡಿಸಿ ಇಸ್ರೇಲ್‌ ಯುಎಸ್ ವಿರುದ್ಧ ಗುಡುಗಿದ ರಷ್ಯಾ ಅಧ್ಯಕ್ಚ ಪುಟಿನ್

ಖಮೇನಿ ಹತ್ಯೆಗೆ ಇದೀಗ ಪ್ರತೀಕಾರ ತೀರಿಸಿಕೊಳ್ಳುವ ಸಮಯ: ಇರಾನ್ ಅಧ್ಯಕ್ಷ

ಲಕ್ಷಾಂತರ ಮಂದಿ ಕಾರ್ಯಕರ್ತರು ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ: ಈಶ್ವರಪ್

ಮುಂದಿನ ಸುದ್ದಿ
Show comments