ಹನಿಟ್ರ್ಯಾಪ್: ಚಾಲಾಕಿ ಮಹಿಳೆ ಬಂಧನ

Webdunia
ಶನಿವಾರ, 26 ಜನವರಿ 2019 (17:27 IST)
ಫೇಸ್ ಬುಕ್ ನಲ್ಲಿ ಪರಿಚಮ ಮಾಡಿಕೊಂಡು ಹನಿಟ್ರ್ಯಾಪ್ ಮೂಲಕ ಉದ್ಯಮಿಗೆ ವಂಚಿಸಿದ್ದ ಮಹಿಳೆ ಸೇರಿ ಮೂವರನ್ನು ಬಂಧಿಸಲಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಹನಿಟ್ರ್ಯಾಪ್ ಸುಂದರಿ ಸೇರಿ ಇಂಡಿಯ ವಿಠ್ಠಲ ವಡ್ಡರ್, ಮುರುಘೇಶ ಉಳ್ಳಾಗಡ್ಡಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಇವರು ವಿಜಯಪುರದ ಉದ್ಯಮಿ ಸುನೀಲ್ ಪಾಟೀಲ್ ಜೊತೆ ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆಸಿ ನಂಬರ್ ಪಡೆದು ಹನಿಟ್ರ್ಯಾಪ್ ಮಾಡಿ ವಂಚನೆ ಮಾಡಿದ್ದರು.

ಉದ್ಯಮಿ ಸುನೀಲ ಪಾಟೀಲ ಅವರನ್ನು ಇಂಡಿಯಲ್ಲಿದ್ದ ತನ್ನ ಸ್ನೇಹಿತೆಯ ಬ್ಯೂಟಿ ಪಾರ್ಲರ್ ಗೆ ಕರೆಯಿಸಿತ್ತು. ಸುನೀಲ ಪಾಟೀಲ ಮಹಿಳೆಯೊಂದಿಗಿದ್ದಾಗ ದಾಳಿ ನಡೆಸಿ ಬೆದರಿಕೆ ಹಾಕಿದ್ದ ಕಿಲಾಡಿಗಳುನಾವುಮಾಧ್ಯಮದವರು ನಿನ್ನ ವಿಡಿಯೋ ಪ್ರಸಾರ ಮಾಡುತ್ತೇವೆಎಂದು ಹೆದರಿಸಿ 24ಸಾವಿರ ನಗದು, ಚಿನ್ನದ ಚೈನ್, ಚಿನ್ನದ ಕಡಗ ಕಿತ್ತುಕೊಂಡು ಪರಾರಿಯಾಗಿದ್ದರು. ಕುರಿತು ಸುನೀಲ ಪಾಟೀಲ ಇಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರು ಸಲ್ಲಿಸಿದ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಫೋಟಕ್ಕೂ ಮುನ್ನಾ ಮನೆಗೆ ಭೇಟಿ ಕೊಟ್ಟ ಬಾಂಬರ್‌ ಉಮರ್ ಮಾಡಿದ್ದೇನು ಗೊತ್ತಾ

Karnataka Weather, ಚಳಿಯ ಜತೆಗೆ ರಾಜ್ಯದ ಈ ಭಾಗದಲ್ಲಿ ಇಂದು, ನಾಳೆ ಮಳೆ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಮುಂದಿನ ಸುದ್ದಿ
Show comments