ಕುಮಟಾ : ಉತ್ತರಕನ್ನಡ ಜಿಲ್ಲೆ ಕರಾವಳಿಯಾದ್ಯಂತ ಕಳೆದ ಎರಡುದಿನಗಳಿಂದ ಎಡೆಬಿಡದೆ ಮಳೆಸುರಿಯುತ್ತಿದ್ದು, ಪರಿಣಾಮ ಕುಮಟಾದ ದಿವಗಿ ಗ್ರಾಮದ ತಂಡರ್ಕುಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದು, 3 ಮಕ್ಕಳು ಸಾವನ್ನಪ್ಪಿದ್ದಾರೆ.
ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಕಡಿಯಲಾಗಿದ್ದು , ಭಾರೀ ಮಳೆಗೆ ಗುಡ್ಡ ಮೀನುಗಾರರ ಮನೆಯ ಮೇಲೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಅವಶೇಷಗಳಡಿ ಸಿಲುಕಿ ಮಕ್ಕಳಾದ ಭವ್ಯಾಅಂಬಿಗ(13), ಯತೀನ್(7)ಮತ್ತು 1.5 ವರ್ಷದ ಮಗು ಧನುಷ್ ಸಾವನ್ನಪ್ಪಿದ್ದಾರೆ. ಉಳಿದ 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕೈಗೊಂಡಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..