ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು,ಈ ಬಾರಿ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.ಕೆಲ ದಿನಗಳಿಂದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗಿದೆ.ಆಗಸ್ಟ್ 3ವರೆಗೆ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.ರಾಜ್ಯದ ಜನರು ಜೂನ್ ನಲ್ಲಿ ಮಳೆ ಕೊರತೆ ಅನುಭವಿಸಿದ್ದರು.ಆದರೆ ಜುಲೈನಲ್ಲಿ ಹೆಚ್ಚು ಮಳೆ ವಾಡಿಕೆಗಿಂತ ಆಗಿದೆಇನ್ನು ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರೀ ಮಳೆ ನಿರೀಕ್ಷೆಯಿದೆ.ಆಗಸ್ಟ್ 3ರವರೆಗೆ ಕರಾವಳಿ, ಮಲೆನಾಡು ಭಾಗ ವಾಡಿಕೆಗಿಂತ ಪ್ರತಿದಿನ 2 cm ಮಳೆ ಸಾಧ್ಯತೆ ಇದೆ.ಉತ್ತರ ಒಳನಾಡಿನಲ್ಲಿ ಅನೇಕ ಜಿಲ್ಲೆಗಳಿಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.