Webdunia - Bharat's app for daily news and videos

Install App

Kerala Rain updates: ಕೇರಳ ಗಡಿನಾಡಿನಲ್ಲಿ ಭಾರೀ ಮಳೆ, ಅನಿಲ್ ಕುಂಬ್ಳೆ ತವರಿನ ಸ್ಥಿತಿ ನೋಡಿ

Krishnaveni K
ಮಂಗಳವಾರ, 3 ಡಿಸೆಂಬರ್ 2024 (09:26 IST)
Photo Credit: X
ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿ ಮಾತ್ರವಲ್ಲ, ಕೇರಳದಲ್ಲಿ ಮಳೆ ಅಬ್ಬರಿಸುತ್ತಿದೆ. ಕೇರಳದ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅನಿಲ್ ಕುಂಬ್ಳೆ ತವರು ಕಾಸರಗೋಡಿನ ಕುಂಬಳೆಯ ರಸ್ತೆಯೊಂದರ ದೃಶ್ಯ ಇಲ್ಲಿನ ಮಳೆಯ ಅಬ್ಬರಕ್ಕೆ ಸಾಕ್ಷಿಯಾಗಿದೆ.

ಕೇರಳದಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದೂ ಕೂಡಾ ಭಾರೀ ಮಳೆ ಮುಂದುವರಿದಿದೆ. ಪರಿಣಾಮ ರಸ್ತೆಗಳೆಲ್ಲವೂ ಜಲಾವೃತವಾಗಿದೆ. ಇಂದು ಗಡಿನಾಡು ಕಾಸರಗೋಡು ಸೇರಿದಂತೆ ಕೇರಳದ ನಾಲ್ಕು ಜಿಲ್ಲೆಗಳಿಗೆ ರಜೆ ಘೋಷಿಸಲಾಗಿದೆ.

ಕಾಸರಗೋಡು ಅಲ್ಲದೆ, ತ್ರಿಶ್ಶೂರ್, ಪಾಲಕ್ಕಾಡ್, ಆಲಪ್ಪುಳ, ಕಣ್ಣೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಾಸರಗೋಡು, ಮಲಪ್ಪುರ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಡಲ ತೀರಗಳಿಗೆ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಕಾಸರಗೋಡಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಕುಂಬಳೆಯಲ್ಲಿ ರಸ್ತೆಯಲ್ಲಿ ನೀರು ತುಂಬಿ ಸ್ವಿಮ್ಮಿಂಗ್ ಪೂಲ್ ನಂತಾಗಿದೆ. ಇಲ್ಲಿ ಈಗ ಫ್ಲೈ ಓವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ನೀರು ತುಂಬಿಕೊಂಡು ಅವಾಂತರ ಸೃಷ್ಟಿಯಾಗಿತ್ತು. ಈ ವಿಡಿಯೋ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುತ್ತಪ್ಪ ರೈ ಮಗ ರಿಕ್ಕಿ ಮೇಲೆ ಗುಂಡಿನ ದಾಳಿ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರಕಾಶ್ ರೈ

Bappanadu Viral Video: ಬಪ್ಪನಾಡು ದುರ್ಗಾಪರಮೇಶ್ವರಿ ರಥ ಏಕಾಏಕಿ ಕುಸಿತ: ಮೇಲಿದ್ದ ಅರ್ಚಕರನ್ನು ದೇವಿಯೇ ಕಾಪಾಡಿದ್ಳು

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

DK Shivakumar: ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಮುಂದಿನ ಸುದ್ದಿ
Show comments