Webdunia - Bharat's app for daily news and videos

Install App

ಒಂದೇ ಮಳೆಗೆ ಶುರುವಾಯ್ತು ಮಂಗಳೂರು, ಬೆಂಗಳೂರು ಪ್ರಯಾಣಿಕರಿಗೆ ಸಂಕಷ್ಟ: ಶಿರಾಡಿ ಘಾಟಿ ಏನಾಗಿದೆ

Krishnaveni K
ಸೋಮವಾರ, 26 ಮೇ 2025 (09:30 IST)
ಮಂಗಳೂರು: ಪ್ರತೀ ವರ್ಷವೂ ಮಳೆ ಬಂದ ಬೆನ್ನಲ್ಲೇ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಆತಂಕ ಶುರುವಾಗುತ್ತದೆ. ಒಂದೇ ಮಳೆಗೆ ಈಗ ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತವಾಗಿದ್ದು, ಪ್ರಯಾಣಕ್ಕೆ ತೊಂದರೆ ಎದುರಾಗಿದೆ.

ಕಳೆದ ವರ್ಷವಂತೂ ಮಳೆಗಾಲದಲ್ಲಿ ಮಂಗಳೂರು-ಬೆಂಗಳೂರು ನಡುವೆ ಸಂಚಾರ ಭಾಗಶಃ  ಬಂದ್ ಆಗಿತ್ತು. ಶಿರಾಡಿ ಘಾಟಿ, ಚಾರ್ಮಾಡಿ ಘಾಟಿ ಎರಡರಲ್ಲೂ ಭೂ ಕುಸಿತವಾಗಿ ರಸ್ತೆ ಮಾರ್ಗವಾಗಿ ಸಂಚರಿಸುವುದೇ ಕಷ್ಟವಾಗಿತ್ತು. ಅತ್ತ ರೈಲು ಮಾರ್ಗವೂ ಬಂದ್ ಆಗಿ ಸಾಮಾನ್ಯ ಜನರಿಗೆ ಕರಾವಳಿ ನಗರಕ್ಕೆ ಹೋಗುವುದು ಕಷ್ಟವಾಗಿತ್ತು.

ಇದೀಗ ಶಿರಾಡಿ ಘಾಟಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರ ನಡುವೆ ಮುಂಗಾರು ಬೇಗನೇ ಶುರುವಾಗಿದ್ದು, ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಗುಡ್ಡ ಕುಸಿತ ಪ್ರಕರಣ ಕಂಡುಬರುತ್ತಿದೆ. ಎರಡೇ ದಿನದ ಮಳೆಗೆ ಈ ಅವಸ್ಥೆಯಾಗಿದೆ

ನಿನ್ನೆ ಶಿರಾಡಿ ಘಾಟಿಯಲ್ಲಿ ಎರಡು ಕಡೆ ಗುಡ್ಡ ಕುಸಿತವಾದ ಘಟನೆ ದಾಖಲಾಗಿದೆ. ಹೀಗಾಗಿ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಕೂಡಾ ಕಂಡುಬಂದಿದೆ. ಇನ್ನಷ್ಟು ದಿನ ಮಳೆಯಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಕಳೆದ ವರ್ಷ ಆಗುಂಬೆ ಮಾರ್ಗವಾಗಿ ಕೆಲವು ದಿನ ಬಸ್ ಸಂಚಾರ ಮಾಡಿದ ಉದಾಹರಣೆಯೂ ಇದೆ.  ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮುಂದಿನ ಎರಡು ತಿಂಗಳಿಗೆ ಕರಾವಳಿ ಭಾಗಕ್ಕೆ ಹೋಗುವುದು ಅಥವಾ ಅಲ್ಲಿಂದ ಬೆಂಗಳೂರಿಗೆ ಬರುವುದು ಆದಷ್ಟು ತಪ್ಪಿಸಿದರೆ ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಮಾಚಲ ಮೇಘಸ್ಫೋಟದ ವೇಳೆ ಗರ್ಭಿಣಿ ಶಿಕ್ಷಕರನ್ನು ಹೊತ್ತೊಯ್ದ ವಿದ್ಯಾರ್ಥಿಗಳು, ಭಾರೀ ಮೆಚ್ಚುಗೆ

ನೈಜರ್‌ ಭಯೋತ್ಪಾದಕ ದಾಳಿ, ಇಬ್ಬರು ಭಾರತೀಯರು ಸಾವು, ಒಬ್ಬರ ಕಿಡ್ನ್ಯಾಪ್‌

ರೊಹಿಂಗ್ಯಾಗಳ ತಪಾಸಣೆಗೆ ಬಂದ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಸಾಧನಾ ಸಮಾವೇಶ ಮುಗಿಸಿ ವಾ‍ಪಾಸ್ಸಾಗುತ್ತಿದ್ದ ಡಿಕೆ ಶಿವಕುಮಾರ್ ಬೆಂಗಾವಲು ವಾಹನ ಪಲ್ಟಿ, 4ಗಾಯ

ಸಿದ್ದರಾಮಯ್ಯನವರ ಹೆಸರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ:ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments