ಭಾರೀ ಮಳೆ; ಕೃತಕ ನೆರೆ ಸೃಷ್ಟಿ- ಕಂಗೆಟ್ಟ ಜನ

Webdunia
ಮಂಗಳವಾರ, 23 ಜುಲೈ 2019 (18:50 IST)
ಉಡುಪಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ತಡ ರಾತ್ರಿ ಸುರಿದ ಮಳೆಯಿಂದ ಉಡುಪಿ ನಗರದ ಬನ್ನಂಜೆ, ಮೂಡನಿಡಂಬರೂ, ಕಲ್ಸಂಕಬಗುಂಡಿಬೈಲು ಪ್ರದೇಶಗಳಲ್ಲಿ ನೀರು ತುಂಬಿ ಕೊಂಡಿದೆ.

ನಿಟ್ಟೂರು ಬನ್ನಂಜೆ ಹಾಗೂ ಗರೋಡಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ. ಕೆಲವೊಂದು ಮನೆಯೊಳಗಡೆಯೂ ನೀರು ತುಂಬಿಕೊಂಡಿದೆ.

ಇಂದ್ರಾಣಿ ನದಿಗೆ ನಗರ ಸಭೆ ಡ್ರೈನೇಜ್ ಪೈಪ್ ಅಳವಡಿಸಿರುವ ಹಿನ್ನಲೆಯಲ್ಲಿ ಕೃತಕ ನೆರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲೂ ಭಾರೀ ಮಳೆ ಸುರಿದಿದೆ. ಯಡಮೊಗ್ಗೆ ಬಳಿ ಸೇತುವೆ ನಿರ್ಮಾಣ ಹಿನ್ನಲೆಯಲ್ಲಿ ತಾತ್ಕಲಿಕವಾಗಿ ನದಿಗೆ ಹಾಕಲಾಗಿದ್ದ ಮಣ್ಣು ಕೊಚ್ಚಿ ಹೋಗಿದೆ. ಸಂಪರ್ಕ ಕೊಂಡಿ ತಪ್ಪಿ ಹೋಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ -ಕಾಲೇಜುಗಳಿಗೆ ರಜೆ ನೀಡಿದೆ.‌ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಬಿಹಾರದಲ್ಲಿ ಎನ್ ಡಿಎ ಗೆಲುವಿನಿಂದ ಜನರಿಗೆ ಖುಷಿಯಾಗಿಲ್ಲ, ಮರು ಚುನಾವಣೆ ಮಾಡಿ: ರಾಬರ್ಟ್ ವಾದ್ರಾ

ಆರ್ ಎಸ್ಎಸ್ ಬಿಟ್ರೆ ಬೇರೆ ವಿಷ್ಯಗಳೇ ಇಲ್ವಾ: ಪ್ರಿಯಾಂಕ್ ಖರ್ಗೆ ನೆಟ್ಟಿಗರ ಪ್ರಶ್ನೆ

Karnataka Weather: ರಾಜ್ಯದಲ್ಲಿ ಈ ವಾರದ ಹವಾಮಾನದಲ್ಲಿ ಏನಿದೆ ಬದಲಾವಣೆ

ಮುಂದಿನ ಸುದ್ದಿ
Show comments